ದೇವಸ್ಥಾನದಲ್ಲಿ ಪಾ೦ಚಭೌತಿಕ ತತ್ವ
ದೇವಸ್ಥಾನದ ಗರ್ಭಗುಡಿಯ ಮೇಲಿನ ಮಾಡನ್ನು ವಿಮಾನವೆನ್ನುವರು.ವಿಮಾನ ಎ೦ದರೆ ಉಪಮೆಯಿಲ್ಲದ್ದು ಎ೦ದರ್ಥ
ಗರ್ಭಗುಡಿಯ ಮೇಲ್ಭಾಗದ ವಿಮಾನವು ಅಗ್ನಿಯ ಭೌತಿಕ ರೂಪ.ಗುಡಿಯ ಬುನಾದಿ ಪೃಥ್ವೀ ತತ್ವವನ್ನು ಸ೦ಕೇತಿಸಿದರೆ,ಗರ್ಭಗುಡಿಯ ಗೋಡೆಗಳು ಆಪ(ನೀರು) ತತ್ವವನ್ನೂ,ವಿಮಾನವು ಅಗ್ನಿ ತತ್ವವನ್ನೂ,ಮೇಲಿರುವ ಕಲಶವು ವಾಯು ತತ್ವವನ್ನು ಪ್ರತಿನಿಧಿಸುತ್ತವೆ.ಕಲಶದ ಮೇಲಿರುವುದು ಆಕಾಶ ತತ್ವ.ಹೀಗೆ ಪಾ೦ಚಭೌತಿಕವಾದ ಇಡೀ ವಿಶ್ವದ ಪ್ರತೀಕವೇ ಗರ್ಭಗುಡಿ.