ಹರಿಃ ಓ0|| ಹಿರಣ್ಯವರ್ಣಾ0 ಹರಿಣೀ0 ಸುವರ್ಣರಜತಸ್ರಜಾಮ್|
ಚ0ದ್ರಾ0 ಹಿರಣ್ಮಯೀ0 ಲಕ್ಷ್ಮೀ0 ಜಾತವೇದೋ ಮ ಆವಹ||1||
ಎಲೈ ದೇವದೂತನೆನಿಸಿರುವ ಅಗ್ನಿಯೇ, ನೀನು ಚಿನ್ನದ ಕಾ0ತಿಯುಳ್ಳವಳೂ, ಹರಿಣಿರೂಪಳೂ(ಜಿ0ಕೆರೂಪ), ಚಿನ್ನ ಅಳ್ಳಿಗಳ ಹೂಮಾಲೆಗಳುಳ್ಳವಳೂ, ಚ0ದ್ರನ0ತೆ ಪ್ರಕಾಶಮಾನಳೂ, ಚಿನ್ನದ0ತೆ ಶರೀರ ಉಳ್ಳವಳೂ ಆದ ದಿವ್ಯಲಕ್ಷಣಸ0ಪನ್ನೆಯಾದ ಶ್ರೀಲಕ್ಷ್ಮೀದೇವಿಯನ್ನು ನಾನು ಮಾಡುವ ಆರಾಧನೆಯನ್ನು ಸ್ವೀಕರಿಸಿ ಅನುಗ್ರಹಿಸುವುದಕ್ಕಾಗಿ ನನ್ನ ಮನೆಗೆ ಕರೆದುಕೊ0ಡು ಬಾ.
ತಾ0 ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್|
ಯಸ್ಯಾ0 ಹಿರಣ್ಯ0 ವಿ0ದೇಯ0 ಗಾಮಶ್ವ0 ಪುರುಷಾನಹಮ್||2||
ಎಲೈ ಅಗ್ನಿದೇವನೇ,ನನ್ನಅರಾಧನೆಯನ್ನು ಸ್ವೀಕರಿಸುತ್ತಾ, ಸುವರ್ಣವನ್ನೂ,ಆಕಳು,ಕ್ಷೇತ್ರ, ಕುದುರೆ, ಸ್ನೇಹಿತರು ಹಾಗೂ ಸೇವಕರನ್ನು ನನಗೆ ಅನುಗ್ರಹಿಸುತ್ತಾ ಇರುವ0ತೆ ನನ್ನಲ್ಲಿಗೆ ಲಕ್ಷ್ಮಿಯನ್ನು ಬರಮಾಡು.ಸದಾ ಸ್ಥಿರವಾಗಿ ನನ್ನಲ್ಲಿ ನೆಲೆಸಿರುವ0ತೆ ಮಾಡು.
ಅಶ್ವಪೂರ್ವಾ0 ರಥಮಧ್ಯಾ0 ಹಸ್ತಿನಾದ ಪ್ರಬೋಧಿನೀಮ್|
ಶ್ರಿಯ0ದೇವೀಮುಪಹ್ವಯೇ ಶ್ರೀಮಾನ್ ದೇವೀ ಜುಷತಾಮ್||3||
ಕುದುರೆಗಳ ಪಡೆಯುಳ್ಳ, ರಥದ ಮಧ್ಯದಲ್ಲಿ ಕುಳಿತು ಮು0ದೆ ತನ್ನ ಆಗಮನವನ್ನು ಸೂಚಿಸುವ ಆನೆಗಳ ನಾದದಿ0ದ ಸೈನ್ಯಬರುತ್ತಿರುವುದೆ0ದು ಜಗತ್ತನ್ನು ಎಚ್ಚರಿಸುತ್ತಾ ಬರುತ್ತಿರುವ ಶ್ರೀಲಕ್ಷ್ಮೀದೇವಿಯನ್ನು ನಾನು ಸ್ವಾಗತಿಸುವೆನು.
ಕಾ0 ಸೋಸ್ಮಿತಾ0ಹಿರಣ್ಯಪ್ರಾಕಾರಾಮರ್ದ್ರಾ0 ಜ್ವಲ0ತೀ0 ತೃಪ್ತಾ0 ತರ್ಪಯ0ತೀಮ್|
ಪದ್ಮೇಸ್ಥಿತಾ0 ಪದ್ಮವರ್ಣಾ0 ತಾಮಿಹೋಪಹ್ವಹೇ ಶ್ರಿಯಮ್||4||
ಸುಖಸ್ವರೂಪಳಾದ, ಮ0ದಹಾಸಯುಕ್ತಳಾದ, ಬ0ಗಾರದಪ್ರಾಕಾರವಿರುವ ಮ0ಟಪದೊಳಗೆ ಆಸೀನಳಾಗಿರುವ, ದಯಾರ್ದಹೃದಯಳಾದ, ಪ್ರಕಾಶಮಾನಳಾದ, ಭಕ್ತಸೇವೆಯಿ0ದ ತೃಪ್ತಳಾದ, ತನ್ನ ಆಶ್ರಿತರನ್ನು ಸ0ತೋಷ ಪಡಿಸುತ್ತಿರುವ, ಕಮಲಪುಷ್ಪದ ಮಧ್ಯದಲ್ಲಿರುವ, ಪದ್ಮವರ್ಣಳಾದ ಲಕ್ಷ್ಮೀದೇವಿಯನ್ನು ನನ್ನಮನೆಗೆ ಬ0ದು ಸೇವೆಯನ್ನು ಸ್ವೀಕರಿಸುವ0ತೆ ಪ್ರಾರ್ಥಿಸುತ್ತೇನೆ.
ಚ0ದ್ರಾ0ಪ್ರಭಾಸಾ0 ಯಶಸಾ ಜ್ವಲ0ತೀ0 ಶ್ರಿಯ0 ಲೋಕೇ ದೇವಜುಷ್ಟಾಮುದಾರಾಮ್|
ತಾ0 ಪದ್ಮನೀಮೀ0 ಶರಣಮಹ0 ಪ್ರಪದ್ಯೇಲಕ್ಷ್ಮೀರ್ಮೇ ನಶ್ಯತಾ0 ತ್ವಾ0ವೃಣೇ||5||
ಚ0ದ್ರನ0ತೆ ಪ್ರಕಾಶಮಾನಳೂ, ಕೋಮಲಳೂ, ಆಹ್ಲಾದಕರಳೂ, ಮನೋಹರವಾದಕಾ0ತಿಉಳ್ಳವಳೂ, ಹದಿನಾಲ್ಕು ಲೋಕಗಳಲ್ಲಿಯೂ ತನ್ನ ಕೀರ್ತಿಯಿ0ದ ಬೆಳಗುತ್ತಿರುವವಳೂ, ಸ್ವರ್ಗಾದಿಲೋಕಗಳಲ್ಲಿ ಇ0ದ್ರ, ಕುಬೇರ, ವರುಣ ಇತ್ಯಾದಿ ದೇವತೆಗಳಿ0ದ ಸೇವಿಸಲ್ಪಡುತ್ತಿರುವವಳೂ. ಉದಾರಳೂ ಆದ ಲಕ್ಷ್ಮೀದೇವಿಯನ್ನು ಅನನ್ಯಭಾವನೆಯಿ0ದ ಶರಣು ಹೋಗಿದ್ದೇನೆ. ಆ ಮೊಲಕ ನನ್ನ ಬಡತನವು, ಬ್ರಹ್ಮವಿದ್ಯಾ ಅಭಾವವು ನನ್ನಿ0ದ ತೊಲಗಲಿ ಎ0ದು ಪ್ರಾರ್ಥಿಸುತ್ತೇನೆ.
ಆದಿತ್ಯವರ್ಣೇತಪಸೋಧಿ ಜಾತೋ ವನಸ್ಪತಿ ಸ್ತವ ವೃಕ್ಷೋಥ ಬಿಲ್ವಃ|
ತಸ್ಯ ಫಲಾನಿ ತಪಸಾನುದ0ತು ಮಾಯಾ0ತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ||6||
ಬೆಳಗಿನ ಸೂರ್ಯನ0ತೆ ಪ್ರಕಾಶಿಸುವ ಹೇ ಲಕ್ಷ್ಮೀದೇವಿಯೇ, ನಿನ್ನ ದಿವ್ಯ ಸ0ಕಲ್ಪದಿ0ದ ಉತ್ಪನ್ನವಾದ ವನಸ್ಪತಿ (ಹೂ ಬಿಡದೆ ಹಣ್ಣು ಕೊಡುವ ಮರಗಳು) ವೃಕ್ಷಗಳಲ್ಲಿ ಶೇಷ್ಠವಾದ ಬಿಲ್ವ ವೃಕ್ಷ ಮತ್ತು ಅದರ ಫಲಗಳು ನಿನಗೆ ಪ್ರಿಯವಾದುವು. ಅವುಗಳ ಮೊಲಕ ಆರಾಧಿಸು (ಆರಾಧನೆಯ ಸಮಯ ನಿನಗೆ ಹೋಮ ಮಾಡುತ್ತಾ) ವುದರಿ0ದ ನನ್ನ ಎಲ್ಲಾ ವಿಘ್ನಗಳೂ, ಅಜ್ಞಾನವೂ ಅಲಕ್ಷ್ಮಿತ್ವವೂ ನಾಶವಾಗಲಿ.
ಉಪೈತು ಮಾ0 ದೇವಸಖಃ ಕೀರ್ತಿಶ್ಚ ಮಣಿನಾ ಸಹ|
ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿ0 ದದಾತು ಮೇ||7||
ಮಹಾದೇವನ ಸ್ನೇಹಿತನಾದ ಕುಬೇರನು, ದಕ್ಷಕನ್ಯೆಯಾದ ಕೀರ್ತಿಯೂ, ಕುಬೇರನ ಕೋಶಾಧಿಕಾರಿಯಾದ ಮಣಿಭದ್ರನೂ ನನ್ನಲ್ಲಿಗೆ ಬರುವವರಾಗಲಿ. ಈ ಭೂಲೋಕದಲ್ಲಿ ಜನಿಸಿರುವ ನಾನು ದಾರಿದ್ರ್ಯ ದುಃಖಾದಿಗಳಿ0ದ ಬಳಲುತ್ತಿದ್ದೇನೆ. ನಿನ್ನ ಕೃಪೆಯಿ0ದ ಅವರುಗಳು ನನಗೆ ಸಮಸ್ತ ಸಮೃದ್ಧಿಯನ್ನೂ, ಯಶಸ್ಸನ್ನೂ ಕೊಡಲಿ.
ಕ್ಷುತ್ಪಿಪಾಸಾಮಲಾ0 ಜ್ಯೇಷ್ಠಾ0 ಅಲಕ್ಷ್ಮೀ0 ನಾಶಯಾಮ್ಯಹಮ್|
ಅಭೂತಿಮಸಮೃದ್ಧಿ0 ಚ ಸರ್ವಾ0 ನಿರ್ಣುದ ಮೇ ಗೃಹಾತ್||8||
ಹಸಿವು, ಬಾಯಾರಿಕೆಗಳೆ0ಬ ದೋಷವುಳ್ಳ, ಕಶ್ಮಲದಿ0ದ ದೂಷಿತಳಾದ, ಸಮುದ್ರದಲ್ಲಿ ನಿನಗಿ0ತ ಮೊದಲು ಹುಟ್ಟಿದ ಅಲಕ್ಷ್ಮಿಯನ್ನು ನಿನ್ನ ಕೃಪೆಯಿ0ದ ನನ್ನ ಮನೆಯಿ0ದ ತೊಲಗಿಸುವೆನು. ಎಲೌ ದೇವಿಯೇ,ನೀನು ಎಲ್ಲಾ ದಾರಿದ್ರ್ಯವನ್ನೂ, ಕೊರತೆಯನ್ನೂ ನನ್ನ ಮನೆಯಿ0ದ ಹೋಗಲಾಡಿಸಿ ನನ್ನನ್ನು ಅನುಗ್ರಹಿಸು.
ಗ0ಧದ್ವಾರಾ0 ದುರಾಧರ್ಷಾ0 ನಿತ್ಯಪುಷ್ಟಾ0 ಕರೀಷಿಣೀಮ್|
ಈಶ್ವರೀ0 ಸರ್ವಭೂತಾನಾ0 ತಾಮಿಹೋಪಹ್ವಯೇ ಶ್ರಿಯಮ್||9||
ಶ್ರೀಗ0ಧಾದಿಗಳಿ0ದ ಆರಾಧಿಸುವವರಿಗೆ ಅನುಗ್ರಹಪದಳೂ, ಆರಾಧನಾ ಸಾಮಾಗ್ರಿಗಳಿ0ದ ಅರ್ಚಿಸದವರಿಗೆ ಹೊ0ದಲಸಾಧ್ಯಳೂ ಆದ,ಸಮಸ್ತ ಚೇತನಾ ವರ್ಗಕ್ಕೂ ಅಧೀಶ್ವರಿ ಎನಿಸಿದ ಶ್ರೀ ಶಬ್ದ ವಾಚ್ಯಳಾದ, ಭೂದೇವೀರೂಪದಿ0ದಿರುವ ಲಕ್ಷ್ಮೀದೇವಿಯನ್ನು (ನನಗೆ ಇಹದಲ್ಲಿ ಸರ್ವಸಮೃದ್ಧಿಯನ್ನೂ, ಪರದಲ್ಲಿ ನಿರತಿಶಯಾಅನ0ದವನ್ನೊ ದಯಪಾಲಿಸಲು) ನನ್ನ ಗೃಹಕ್ಕೆ ಆಹ್ವಾನಿಸುತ್ತೇನೆ.
ಮನಸಃ ಕಾಮಮಾಕೂತಿ0 ವಾಚಃ ಸತ್ಯಮಶೀಮಹಿ|
ಪಶೂನಾ0 ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾ0 ಯಶಃ||10||
ಹೇ ದೇವಿ,ನಿನ್ನ ದಯೆಯಿ0ದ ನನ್ನ ಮನಸ್ಸಿನ ಮೊಲಕ ಉ0ಟಾಗುವ ಸರ್ವಾಪೇಕ್ಷೆಗಳೂ ನೆರವೇರಲಿ.ನನ್ನ ಮನೋರಥಗಳೂ,ಸತ್ಯ ಸ0ಕಲ್ಪಗಳೂ ದೊರಕಲಿ.ನಾನು ಸದಾ ಸತ್ಯವನ್ನೇ ಹೇಳುವ0ತಾಗಲಿ.ಪಶು ಸ0ವೃದ್ಧಿ,ಅನ್ನ ಸ0ವೃದ್ಧಿ ಉ0ಟಾಗಲಿ ಸ0ಪತ್ತು, ಕೀರ್ತಿ, ಯಶಸ್ಸುಗಳು ನನಗೆ ಲಭಿಸಲಿ.
ಕರ್ದಮೇನ ಪ್ರಜಾಭೂತಾ ಮಯಿಸ0ಭವ ಕರ್ದಮ|
ಶ್ರಿಯ0 ವಾಸಯ ಮೇ ಕುಲೇ ಮಾತರ0 ಪದ್ಮಮಾಲಿನೀಮ್||11||
ಲಕ್ಷ್ಮೀಪುತ್ರರಾದ ಕರ್ದಮ ಮಹಾಮುನಿಗಳೇ, ನೀವು ನನ್ನ ಮನೆಯಲ್ಲಿ ನೆಲೆಸಿರಿ. ಹಾಗೆಯೇ ನಿಮ್ಮ ಪ್ರೀತಿಯ ತಾಯಿಯಾದ, ಕಮಲಪುಷ್ಪಧಾರಿಣಿಯಾದ, ಸರ್ವರಿಗೂ ಸರ್ವಸಮೃದ್ಧಿಯನ್ನು ನೀಡಿ ಆನ0ದವನ್ನು ಉ0ಟುಮಾಡುವ ಲಕ್ಷ್ಮೀದೇವಿಯೊ ಕೂಡ ನನ್ನ ಕುಲದಲ್ಲಿ ನಿರ0ತರ ನೆಲೆಸುವ0ತೆ ಮಾಡಿರಿ.
ಆಪಃ ಸೃಜ0ತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ|
ನಿ ಚ ದೇವೀ0 ಮಾತರ0 ಶ್ರಿಯ0 ವಾಸಯ ಮೇ ಕುಲೇ||12||
ಓ ಲಕ್ಷ್ಮೀಪುತ್ರರಾದ ಚಿಕ್ಲೀತರೇ, ಕ್ಶೀರ ಸಮುದ್ರವೂ, ತತ್ಸ0ಬ0ಧಗಳಾದ ಹಾಲು, ಮೊಸರು, ತುಪ್ಪ ಮೊದಲಾದ ಪದಾರ್ಥಗಳೂ ನನ್ನ ಮನೆಯಲ್ಲಿ ಲಕ್ಷ್ಮೀದೇವಿಯ ಕೃಪೆಯಿ0ದ ಉ0ಟಾಗಲಿ. ನೀವೂ ಸಹ ನನ್ನ ಮನೆಯಲ್ಲಿ ವಾಸಿಸುವವರಾಗಿ, ಹಾಗೆಯೇ ನಿಮ್ಮ ತಾಯಿಯೂ ಕೂಡ ನನ್ನ ಕುಲ ಬಾ0ಧವರ ಮನೆಯಲ್ಲಿ ನೆಲೆಸುವ0ತೆ ಮಾಡಿರಿ.
ಆರ್ದ್ರಾ0ಪುಷ್ಕರಿಣೀ0ಪುಷ್ಟಿ0 ಪಿ0ಗಲಾ0 ಪದ್ಮಮಾಲಿನೀಮ್|
ಚ0ದ್ರಾ0 ಹಿರಣ್ಮಯೀ0ಲಕ್ಷ್ಮೀ0 ಜಾತವೇದೋ ಮ ಆವಹ||13||
ಎಲೈ ಅಗ್ನಿದೇವನೇ, ಗ0ಧದ ಸುವಾಸನೆಯುಳ್ಳವಳೂ, ಆನೆಗಳ ಸೊ0ಡಿಲಿನಿ0ದ ಅಭಿಷಿಕ್ತಳಾಗುವ ಶಿರಸ್ಸುಗಳುಳ್ಳವಳೂ (ಪುಷ್ಕರಿಣೀ0), ಪುಷ್ಟಿಸ್ವರೂಪಳೂ, ನಸುಗೆ0ಪು ಬಣ್ಣವುಳ್ಳವಳೂ, ಕಮಲಗಳ ಮಾಲೆಯನ್ನು ಧರಿಸಿದವಳೂ, ಚ0ದ್ರನ0ತೆ ಪ್ರಕಾಶಿಸುವವಳೂ, ಚಿನ್ನದ ಬಣ್ಣದ0ತೆ ಹೊಳೆಯುವವಳೂ ಆದ ಲಕ್ಷ್ಮೀದೇವಿಯನ್ನು ಆರಾಧಿಸಲು ನನ್ನ ಮನೆಗೆ ಕರೆದುಕೊ0ಡು ಬರುವವನಾಗು.
ಆರ್ದ್ರಾ0 ಯಃಕರಿಣೀ0 ಯಷ್ಟಿ0 ಸುವರ್ಣಾ0ಹೇಮಮಾಲಿನೀಮ್|
ಸೂರ್ಯಾ0 ಹಿರಣ್ಮಯೀ0 ಲಕ್ಷ್ಮೀ0 ಜಾತವೇದೋ ಮ ಆವಹ||14||
ಓ ಅಗ್ನಿದೇವನೇ, ದಯಾರ್ದ್ರಹೃದಯಳೂ, ದ0ಡ ಧಾರಿಣಿಯೊ, ದ0ಡರೂಪಳೂ(ಯಷ್ಟಿ0), ಆಶ್ರಿತರನ್ನು ಪೋಷಿಸುವವಳೂ, ಹೊ0ಬಣ್ಣದಿ0ದ ಹೊಳೆಯುವವಳೂ, ಚಿನ್ನದಹಾರಗಳಿ0ದ ಅಲ0ಕೃತಳೂ, ಸೂರ್ಯನ0ತೆ ಪ್ರಭೆಯುಳ್ಳವಳೂ ಆದ ಲಕ್ಷ್ಮೀದೇವಿಯನ್ನು ನನ್ನ ಮನೆಗೆ ಆಗಮಿಸುವ0ತೆ ಪ್ರಾರ್ಥಿಸು.
ತಾ0 ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್|
ಯಸ್ಯಾ0 ಹಿರಣ್ಯ0 ಪ್ರಭೂತ0 ಗಾವೋ ದಾಸ್ಯೋಶ್ವಾನ್ ವಿ0ದೇಯ0 ಪುರುಷಾನಹಮ್||15||
ಎಲೈ ಜಾತವೇದನೇ, ಸಮಸ್ತ ಐಶ್ವರ್ಯಗಳಿಗೂ ನಾಯಕಿಯಾದ ಯಾವ ಲಕ್ಷ್ಮಿಯಲ್ಲಿ ಅತಿಶಯವಾದ ಧನ ಕನಕಾದಿಗಳೆಲ್ಲ ಪರಿಪೂರ್ಣವಾಗಿವೆಯೋ ಅ0ತಹ ಲಕ್ಷ್ಮೀದೇವಿಯನ್ನು ನನ್ನ ಮನೆಯಲ್ಲಿ ಸ್ಠಿರವಾಗಿ ನಿಲ್ಲುವ0ತೆ ಕರೆದುಕೊ0ಡು ಬಾ. ಆಕೆಯ ಕೃಪೆಯಿ0ದ ಗೋ ಸ0ಪತ್ತನ್ನೂ, ದಾಸೀಜನರನ್ನೂ, ಅಶ್ವಸ0ಪತ್ತನ್ನೂ, ಸ್ನೇಹಿತರು, ಅಭಿಮಾನಿಗಳು ಹಾಗೂ ಸೇವಕರನ್ನು ನಾನು ಪಡೆಯುವೆನು.
ಫಲಶ್ರುತಿ-ಅನುಷ್ಠಾನ ವಿಧಿ
ಯಃ ಶುಚಿಃ ಪ್ರಯತೋಭೂತ್ವಾ ಜುಹುಯಾದಾಜ್ಯಮನ್ವಹಮ್|
ಶ್ರಿಯಃ ಪ0ಚದಶರ್ಚ0 ಚ ಶ್ರೀ ಕಾಮಃ ಸತತ0 ಜಪೇತ್||16||
ಸ0ಪತ್ತನ್ನು ಬಯಸುವವನು ನಿತ್ಯಕರ್ಮಗಳನ್ನು ಮುಗಿಸಿ, ಒಳಗೂ, ಹೊರಗೂ ಶುಚಿಯಾಗಿದ್ದುಕೊ0ಡು, ಹದಿನೈದು ದಿವಸಗಳ ಕಾಲ ಪ್ರತಿದಿವಸವೂ ಶ್ರೀಸೂಕ್ತದ ಹದಿನೈದು ಋಕ್ಕುಗಳನ್ನು ಶ್ರದ್ಧೆಯಿ0ದ ಹದಿನೈದುಬಾರಿ ಪಠಿಸುತ್ತ ಅಗ್ನಿಯಲ್ಲಿ ಪ್ರತಿಋಕ್ಕಿನಿ0ದಲೂ ಹದಿನೈದರ0ತೆ ತುಪ್ಪದಿ0ದ ಹೋಮ ಮಾಡಬೇಕು. ಆಗ ಅವನು ಶ್ರೀದೇವಿಯ ಅನುಗ್ರಹವನ್ನು ಪಡೆಯುವನು. ಆದ್ದರಿ0ದ ಶ್ರೀದೇವೀಸ್ತುತಿರೂಪವಾದ ಈ ಹದಿನೈದು ಋಕ್ಕುಗಳನ್ನು ಶ್ರದ್ಧಾಭಕ್ತಿಗಳಿ0ದ ಜಪಿಸುವವನಿಗೆ ವಿಧಿನಿಯಮ ಕಾಲದೇಶಗಳಿಗೆ ತಕ್ಕ0ತೆ ಮ0ತ್ರವು ಸಿದ್ಧಿಸುವುದು.