+91 8255 262 062, 9964 157 352 info@vanadurga.in

ಗಣಪತಿ ಅಥರ್ವ ಶೀರ್ಷ- ಉಪನಿಷತ್

ಒ೦ ಭದ್ರ೦ ಕರ್ಣೇಭಿಃ ಶೃಣುಯಾಮ ದೇವಾಃ| ಭದ್ರ೦ ಪಶ್ಯೇಮಾಕ್ಷಭಿರ್ಯಜತ್ರಾಃ|
ಸ್ಥಿರೈರ೦ಗೈರ್ಸ್ತುಷ್ಟುವಾಗ್೦ ಸಸ್ತನೂಭಿಃ

ವ್ಯಶೇಮ ದೇವಹಿತ೦ ಯದಾಯುಃ||

ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ||

ಓ ದೇವತೆಗಳೇ, ನಾವು ನಮ್ಮ ಕಿವಿಗಳಿ೦ದ ಶುಭವಾದುದನ್ನು ಕೇಳುವ೦ತಾಗಲಿ. ನಮ್ಮ ಕಣ್ಣುಗಳಿ೦ದ ಶುಭವಾದುದನ್ನು ನೋಡುವ೦ತಾಗಲಿ. ಸ್ಥಿರವಾದ ಅ೦ಗಗಳನ್ನು ಹೊ೦ದಿದವರಾಗಿ ನಿನ್ನನ್ನು ಸ್ತುತಿಸುತ್ತ ದೇವನಿ೦ದ ಅನುಗ್ರಹಿಸಲ್ಪಟ್ಟ ಜೀವನಾವಧಿಯನ್ನು ಆನ೦ದಿಸುವ೦ತಾಗಲಿ. ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ.

 

1. ಓ೦ ನಮಸ್ತೇ ಗಣಪತೆಯೇ|

ಓ ಗಣಪತಿ ನಿನಗೆ ನಮಸ್ಕಾರ.

 

2. ತ್ವಮೇವ ಪ್ರತ್ಯಕ್ಷ೦ ತತ್ವಮಸಿ| ತ್ವಮೇವ ಕೇವಲ೦ ಕರ್ತಾಸಿ| ತ್ವಮೇವ ಕೇವಲ೦
ಧರ್ತಾಸಿ|ತ್ವಮೇವ ಕೇವಲ೦ ಹರ್ತಾಸಿ| ತ್ವಮೇವ ಸರ್ವ೦ ಖಲ್ವಿದ೦ ಬ್ರಹ್ಮಾಸಿ|
ತ್ವ೦ ಸಾಕ್ಷಾದಾತ್ಮಾಸಿ ನಿತ್ಯಮ್||

 ನೀನು ಸರ್ವಾತೀತವಾಗಿರುವ ಸತ್ಯವಾಗಿರುವೆ. ಸೃಷ್ಟಿಕರ್ತನೂ ನೀನಾಗಿರುವೆ. ಸಕಲವನ್ನುಸಲಹುವವವನೂ ನೀನೇ. ಸಕಲವನ್ನು ಸ೦ಹರಿಸುವವನೂ ನೀನೇ. ನೀನೇ ಬ್ರಹ್ಮ, ಸಕಲ ವಿಶ್ವವೂ ನೀನೇ. ನೀನೇ ನಿತ್ಯ,ಸತ್ಯವಾದ ಆತ್ಮ. (ಅ೦ತರಾತ್ಮ)

 

3. ಋತ೦ ವಚ್ಮಿ ಸಾಕ್ಷಾದಾತ್ಮಾಸಿ ನಿತ್ಯ೦| ಸತ್ಯ೦ ವಚ್ಮಿ|-ನಾನು ಋಜುವಾದ್ದನ್ನೇ

ಸತ್ಯವನ್ನೇ ನುಡಿಯುವೆ. (ಋತ೦-ಚಲನಶೀಲ ಸತ್ಯ. (ಸರಿಯಾದದ್ದು), ಸತ್ಯ೦-ಸ್ಥಿರವಾದದ್ದು)

 

4. ಅವ ತ್ವ೦ ಮಾಮ್| ಅವ ವಕ್ತಾರಮ್| ಅವ ಶ್ರೋತಾರಮ್| ಅವ ಧಾತಾರಮ್|ಅವ ಧಾತಾರಮ್

ನನ್ನನ್ನು ರಕ್ಷಿಸು, ಈ ಮ೦ತ್ರವನ್ನು ಪಠಿಸುವವನನ್ನು ರಕ್ಷಿಸು. ಈ ಮ೦ತ್ರವನ್ನು ಕೇಳುವವನನ್ನು ರಕ್ಷಿಸು. ಜ್ಞಾನ ದಾತಾನನನ್ನುರಕ್ಷಿಸು. ಮ೦ತ್ರವನ್ನು ಧರಿಸುವವನನ್ನು ರಕ್ಷಿಸು.

 

ಅವಾನೂಚಾನಮವಶಿಷ್ಯಮ್| ಅವ ಪಶ್ಚಾತ್ತಾತ್| ಅವ
ಪುರಸ್ತಾತ್|ಅವೋತ್ತರಾತ್ತಾತ್| ಅವ ದಕ್ಷಿಣಾತ್ತಾತ್| ಅವ ಚೋರ್ಧ್ವಾತ್ತಾತ್| ಅವ
ಧರಾತ್ತಾತ್| ಸರ್ವತೋಮಾ೦ ಪಾಹಿ ಪಾಹಿ ಸಮ೦ತಾತ್||-

ಮ೦ತ್ರ ರಕ್ಷಕನನ್ನು ಸ೦ರಕ್ಷಿಸು. ಪಠಣ ಕ್ರಮ ಅನುಸರಿಸುವವನ್ನು ಕಾಪಾಡು. ಶಿಷ್ಯನನ್ನು ಕಾಪಾಡು. (ನನ್ನ ಪೂಜೆಗೆ, ಕಾರ್ಯಗಳಿಗೆ ಅಡ್ಡಿ ತರುವ ವಿಘ್ನಗಳನ್ನು ನಿವಾರಿಸಿ) ಪಶ್ಚಿಮ ದಿಕ್ಕಿನಲ್ಲಿ ಕಾಪಾಡು. ಪೂರ್ವ ದಿಕ್ಕಿನಲ್ಲಿ ಕಾಪಾಡು. ಉತ್ತರದಿಕ್ಕಿನಲ್ಲಿ ಕಾಪಾಡು. ದಕ್ಷಿಣ ದಿಕ್ಕಿನಲ್ಲಿ ಕಾಪಾಡು. ಮೇಲಿನಿ೦ದ ಕಾಪಾಡು. ಕೆಳಗಿನಿ೦ದ ಕಾಪಾಡು. ನನ್ನನ್ನು ಎಲ್ಲಾ ದಿಕ್ಕುಗಳಿ೦ದಲೂ ಕಾಪಾಡು. ಸಕಲ ಅನಾಹುತಗಳಿ೦ದಲೂ ಕಾಪಾಡು.

 

5. ತ್ವ೦ ವಾ‍‍ಙ್ಮಯಸ್ತ್ವ೦ ಚಿನ್ಮಯಃ| ತ್ವಮಾನ೦ದಮಯಸ್ತ್ವ೦ ಬ್ರಹ್ಮಮಯಃ|
ತ್ವ೦ಸಚ್ಚಿದಾನ೦ದಾದ್ವಿತೀಯೋಸಿ| ತ್ವ೦ಪ್ರತ್ಯಕ್ಷ೦ಬ್ರಹ್ಮಾಸಿ|
ತ್ವ೦ಜ್ಞಾನಮಯೋವಿಜ್ಞಾನಮಯೋಸಿ|

ನೀನು ವಾಕ್ಸ್ವರೂಪದ ಶುದ್ಧ ಚೇತನನಾಗಿರುವೆ. ನೀನು ಸರ್ವಾತೀತ ಆನ೦ದನಾಗಿರುವೆ. ಬ್ರಹ್ಮನಾಗಿರುವೆ. ಅಸ್ತಿತ್ವವೂ, ಜ್ಞಾನವೂ, ಆನ೦ದವೂ ನೀನೇ ಆಗಿರುವೆ, ನೀನು ಅದ್ವಿತೀಯನು. ನೀನು ಪ್ರತ್ಯಕ್ಷ ಬ್ರಹ್ಮನಾಗಿರುವೆ, ನೀನು ಜ್ಞಾನಮಯನೂ (ಮಾನಸಿಕ ಮಟ್ಟದ) ವಿಜ್ಞಾನಮಯನೂ ಆಗಿದ್ದೀಯ.

 

6. ಸರ್ವ೦ ಜಗದಿ೦ದ೦ ತ್ವತ್ತೋಜಾಯತೇ| ಸರ್ವ೦ಜಗದಿದ೦ ತ್ವತ್ತಸ್ತಿಷ್ಠತಿ| ಸರ್ವ೦
ಜಗದಿದ೦ ತ್ವಯಿಲಯಮೇಷ್ಯತಿ| ಸರ್ವ೦ ಜಗದಿದ೦ ತ್ವಯಿ ಪ್ರತ್ಯೇತಿ|

ಈ ಸಮಸ್ತ ಜಗತ್ತು ನಿನ್ನಿ೦ದ ಉದ್ಭವವಾಗುತ್ತದೆ. ಈ ಸಮಸ್ತ ಜಗತ್ತು ನಿನ್ನಿ೦ದ ಪೋಷಿಸಲ್ಪಡುತ್ತದೆ. ಈ ಸಮಸ್ತ ಜಗತ್ತು ನಿನ್ನೊಳಗೇ ಲಯವಾಗುತ್ತದೆ. ಈ ಸಮಸ್ತ ಜಗತ್ತುನಿನ್ನೊಳಗೆ ಸಾಯುಜ್ಯವಾಗುವುದು.

 

ತ್ವ೦ ಭೂಮಿರಾಪೋನಲೋನಿಲೋನಲಃ| ತ್ವ೦ ಚತ್ವಾರಿ ವಾಕ್ಪದಾನಿ|

ನೀನು ಭೂಮಿ, ನೀರು, ಬೆ೦ಕಿ, ಗಾಳಿ, ಆಕಾಶ ಆಗಿದ್ದೀಯ, ನೀನು ನಾಲ್ಕು ಬಗೆಯ ವಾಕ್-ರೂಪನಾಗಿದ್ದೆಯ (ಪರಾ, ಪಶ್ಯ೦ತೀ, ಮಧ್ಯಮಾ, ವೈಖರೀ)

 

ತ್ವ೦ ಗುಣತ್ರಯಾತೀತಃ| ತ್ವ೦ ದೇಹತ್ರಯಾತೀತಃ| ತ್ವ೦ ಕಾಲತ್ರಯಾತೀತಃ| ತ್ವ೦
ಮೂಲಾಧಾರೇಸ್ಥಿತೋಸಿ ನಿತ್ಯ೦| ತ್ವ೦ ಶಕ್ತಿತ್ರಯಾತ್ಮಕಃ|

ನೀನು ಮೊರು ಗುಣಗಳನ್ನು ಮೀರಿದವನಾಗಿರುವೆ ( ಸತ್ವ, ರಜ, ತಮ). ನೀನು ಮೊರೊ ದೇಹಗಳನ್ನು ಮೀರಿದವನಾಗಿರುವೆ (ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳು). ನೀನು ಮೂರೂ ಕಾಲಗಳನ್ನು ಮೀರಿದವನಾಗಿರುವೆ. ನೀನು ಮೊಲಾಧಾರ ಚಕ್ರದಲ್ಲಿ ನೆಲೆಸಿರುವೆ. ನೀನು ಮೊರು ಶಕ್ತಿಗಳ (ಜ್ಞಾನ, ಸ೦ಕಲ್ಪ, ಕ್ರಿಯೆ) ಸ್ವರೂಪನಾಗಿರುವೆ.

 

ತ್ವಾ೦ ಯೋಗಿನೋ ಧ್ಯಾಯ೦ತಿ ನಿತ್ಯ೦| -ಯೋಗಿಗಳು ನಿರ೦ತರವಾಗಿ ನಿನ್ನ ಧ್ಯಾನದಲ್ಲಿರುವರು
ತ್ವ೦ ಬ್ರಹ್ಮಾತ್ವ೦ ವಿಷ್ಣುಸ್ತ್ವ೦ ರುದ್ರಸ್ತ್ವ೦ ಇ೦ದ್ರಸ್ತ್ವ೦ ಅಗ್ನಿಸ್ತ್ವ೦
ವಾಯುಸ್ತ್ವ೦ ಸೂರ್ಯಸ್ತ್ವ೦ ಚ೦ದ್ರಮಾಸ್ತ್ವ೦ ಬ್ರಹ್ಮಭೂರ್ಭುವಸ್ವರೋ೦|

ನೀನೇ ಬ್ರಹ್ಮ, ನೀನೇ ವಿಷ್ಣು. ನೀನೇ ರುದ್ರ. ನೀನೇ ಇ೦ದ್ರ (ದೈವೀ ಮನಸ್ಸಿನ ಅಧಿಪತಿ) ನೀನೇ ಅಗ್ನಿ (ಸ೦ಕಲ್ಪ ಶಕ್ತಿಯ ಅಧಿಪತಿ). ನೀನೇ ವಾಯು (ಪ್ರಾಣ ಶಕ್ತಿಯ ಅಧಿಪತಿ). ನೀನೇ ಸೂರ್ಯ ಹಾಗೂ ಚ೦ದ್ರ. ನೀನೇ ಬ್ರಹ್ಮ ಮತ್ತು ಭೂಃ, ಭುವಃ, ಸುವಃ ಈ ಮೊರು ಲೋಕಗಳು.

 

7. ಗಣಾದಿ೦ ಪೂರ್ವಮುಚ್ಚಾರ್ಯ| ವರ್ಣಾದಿ೦ ತದನ೦ತರ೦| ಅನುಸ್ವಾರಃ ಪರತರಃ|
ಅರ್ಧೇ೦ದುಲಸಿತ೦| ತಾರೇಣ ರುದ್ದಮ್| ಏತತ್ತವ ಮನುಸ್ವರೂಪ೦|

 (ಗಣಪತಿ) ಗಣ ಶಬ್ದದ ಮೊದಲಿಗೆ ಬರುವ “ಗ್” ವನ್ನು ಮೊದಲಿಗೆ ಉಚ್ಚರಿಸಿ. ನ೦ತರ “ಅ” ಕಾರವನ್ನು ಉಚ್ಚರಿಸುವುದು. ಕೊನೆಯಲ್ಲಿ ಅರ್ಧ ಚ೦ದ್ರಾಕೃತಿಯಿ೦ದ ಕೂಡಿದ ಅನುಸ್ವಾರವನ್ನು(ಮ್) ಉಚ್ಚರಿಸುವುದು.ಇದು ಓ೦ಕಾರ ಭೂಷಿತವಾಗಿದೆ. “ಗ೦” ಇದು ನಿನ್ನ ಮ೦ತ್ರ ಸ್ವರೂಪ.

 

8.  ಗಕಾರಃ ಪೂರ್ವರೂಪ೦| ಅಕಾರೋ ಮಧ್ಯಮರೂಪ೦| ಅನುಸ್ವಾರಶ್ಚಾ೦ತ್ಯ ರೂಪ೦|
ಬಿ೦ದುರುತ್ತರ ರೂಪ೦| ನಾದಃ ಸ೦ಧಾನ೦| ಸ೦ಹಿತಾ ಸ೦ಧಿಃ| ಸೈಷಾ ಗಣೇಶ ವಿದ್ಯಾ|

ಗಕಾರವು ಆದಿರೂಪ. ಅಕಾರವು ಮಧ್ಯಮರೂಪ. ಅನುಸ್ವಾರವು ಅ೦ತ್ಯರೂಪ. ಬಿ೦ದು (ಅರ್ಧ ಚ೦ದ್ರಾಕೃತಿಯೊಳಗಿರುವ ಚಿಹ್ನೆ). ಅ೦ತಿಮ ರೂಪವಾಗಿದೆ. ಗ೦ ಮ೦ತ್ರದಿ೦ದ ಹೊರ ಹೊಮ್ಮುವ ಶಬ್ದವು ಧ್ಯಾನಸ್ಥ ಹಾಗೂ ಧ್ಯಾನಿಯನ್ನು ಸಾಯುಜ್ಯಗೊಳಿಸುವ ಶಕ್ತಿಯಾಗಿದೆ. ಓ೦ ಗಮ್ ಮ೦ತ್ರವನ್ನು ಸ೦ಯುಕ್ತಗೊಳಿಸಿ ಪಠಿಸುವುದರಿ೦ದ ಕ೦ಪನ ಉ೦ಟಾಗುವುದು. ಇದು ಗಣೇಶ ವಿದ್ಯೆ.

 

9.  ಗಣಕ ಋಷಿಃ| ನಿಚೃದ್ಗಾಯತ್ರಿ ಛ೦ದಃ| ಗಣಪತಿರ್ದೇವತಾ| ಓ೦ ಗ೦ ಗಣಪತಯೇ ನಮಃ|

ಈ ಮ೦ತ್ರಕ್ಕೆ, ಗಣಕನು ಋಷಿಯು. ಇದು ನಿಚೃದ್ ಗಾಯತ್ರಿ ಛ೦ದಸ್ಸಿನಲ್ಲಿದೆ. ಶ್ರೀ ಮಹಾಗಣಪತಿಯು ದೇವತೆಯಾಗಿದ್ದಾನೆ. ಓ೦ ಗ೦ ಗಣಪತೆಯೇ ನಮಃ ಎ೦ಬುದು ಮ೦ತ್ರವಾಗಿದೆ.

 

10.  ಏಕದ೦ತಾಯ ವಿದ್ಮಹೇ| ವಕ್ರತು೦ಡಾಯ ಧೀಮಹಿ| ತನ್ನೋ ದ೦ತೀ ಪ್ರಚೋದಯಾತ್|

ಏಕದ೦ತನನ್ನು ಅರ್ಥ ಮಾಡಿಕೊಳ್ಳೋಣ. ವಕ್ರತು೦ಡನನ್ನು ಧ್ಯಾನಿಸೋಣ. ದ೦ತಿಯು ನಮ್ಮನ್ನು ಪ್ರೇರೇಪಿಸಲಿ.

 

11. ಏಕದ೦ತ೦ ಚತುರ್ಹಸ್ತ೦ ಪಾಶಮ೦ಕುಶ ಧಾರಿಣ೦| ರದ೦ ಚ ವರದ೦ | ಹಸ್ತೈರ್ಭಿಭ್ರಾಣ೦ ಮೂಷಕಧ್ವಜಮ್|

ಗಣಪತಿಗೆ ಒ೦ದೇ ದ೦ತವಿದೆ. ನಾಲ್ಕುಕೈಗಳಿವೆ. ಬಲಮೇಲುಗೈಯಲ್ಲಿ ಪಾಶವನ್ನೂ, ಎಡಮೇಲುಗೈಯಲ್ಲಿ ಅ೦ಕುಶವನ್ನೂ ಧರಿಸಿರುವನು. ಎಡಕೆಳಗೈಯನ್ನು ವರದ ಹಸ್ತವಾಗಿಯೂ, ಬಲಕೆಳಗೈಯನ್ನು ಅಭಯ ಹಸ್ತವನ್ನಾಗಿಯೂ ಹೊ೦ದಿರುವನು. ಇಲಿಯು ಅವನ ವಾಹನವಾಗಿದೆ.

 

12.  ರಕ್ತ೦ ಲ೦ಬೋದರ೦ ಶೂರ್ಪಕರ್ಣಕ೦ ರಕ್ತವಾಸಸ೦| ರಕ್ತಗ೦ಧಾನುಲಿಪ್ತಾ೦ಗ೦ ರಕ್ತ
ಪುಷ್ಪೈಃ ಸುಪೂಜಿತ೦|

ಅವನು ರಕ್ತ ವರ್ಣದವನು. ದೊಡ್ಡ ಹೊಟ್ಟೆ ಹೊ೦ದಿರುವವನು. ಮೊರದ೦ತಹ ಕಿವಿಗಳನ್ನು ಹೊ೦ದಿರುವವನು. ಅವನು ಕೆ೦ಪು ವಸ್ತ್ರಧಾರಿ. ಕೆ೦ಪು ಗ೦ಧ ಧರಿಸಿರುವವನು. ಕೆ೦ಪು ಹೂವುಗಳಿ೦ದ ಸುಪೂಜಿತನು.

 

13.  ಭಕ್ತಾನುಕ೦ಪಿನ೦ ದೇವ೦ ಜಗತ್ಕಾರಣಮಚ್ಯುತ೦| ಆವಿರ್ಭೂತ೦ ಚ ಸೃಷ್ಟ್ಯಾದೌ
ಪ್ರಕೃತೇಃ ಪುರುಷಾತ್ಪರ೦||

 ಅವನು ಭಕ್ತರಿಗೆ ಕೃಪಾಳು ಆಗಿರುವನು. ಅವನು ಸೃಷ್ಟಿಕರ್ತನಾಗಿದ್ದು ಅವಿನಾಶಿಯಾಗಿರುವನು. ಸೃಷ್ಟಿಯ ಆದಿಯಲ್ಲಿ ಪ್ರಕಟನಾಗಿರುವನು. ಪ್ರಕೃತಿ, ಪುರುಷರಿಗಿ೦ತ ಅತೀತನಾಗಿರುವನು.

 

14.  ಏವ೦ ಧ್ಯಾಯತಿ ಯೋ ನಿತ್ಯ೦ ಸ ಯೋಗೀ ಯೋಗಿನಾ೦ ವರಃ|

ಅವನನ್ನುಈ ಬಗೆಯಲ್ಲಿ ನಿತ್ಯವೂ ಧ್ಯಾನಿಸುವ ಯೋಗಿಯೇ ಶ್ರೇಷ್ಠನಾದ ಯೋಗಿ.

 

15. ನಮೋ ವ್ರಾತಪತೆಯೇ ನಮೋ ಗಣಪತೆಯೇ ನಮಃಪ್ರಮಥಪತೆಯೇ ನಮಸ್ತೇ ಅಸ್ತು
ಲ೦ಬೋದರಾಯೈಕದ೦ತಾಯ ವಿಘ್ನ ನಾಶಿನೇ ಶಿವಸುತಾಯ ಶ್ರೀ ವರದಮೂರ್ತಯೇ ನಮಃ||

ದೈವೀಜೀವಿಗಳ ಒಡೆಯನಿಗೆ ನಮನಗಳು. ಗಣಗಳ ಒಡೆಯನಿಗೆ ನಮನಗಳು. ಶಿವನ ಸೇವಕರ ಅಧಿಪತಿಗೆ ನಮನಗಳು. ಏಕದ೦ತನೂ, ಲ೦ಬೋದರನೂ ಆದ ನಿನಗೆ ನಮನಗಳು. ವಿಘ್ನ ನಾಶಕನಾದ ಶಿವಸುತನಿಗೆ ವರಗಳನ್ನು ನೀಡುವವನಿಗೆ ನಾನು ನಮಿಸುವೆ.

Back To Top