ಶ್ರೀ ಗಣೇಶ ನಾಗರಾಜಾಭ್ಯಾಂ ಶಾಸ್ತೃಭೂತಗಣೈಃ ಸಹ |
ದೇಂತಡ್ಕಾಖ್ಯ ಪುರಾವಾಸೇ ವನದುರ್ಗೇ ನಮೋಸ್ತುತೇ ||
The Temple was miraculously discovered in the nearby forest in completely deteriorated condition by a saintly person in the year 2001. Later, it was then renovated under the divine guidance of Sri Sri Sri Raghaveshwara Bharati Swamiji, Hosanagara of Gokarnamandala Mandala Shankara Peetam and Brahmakalashotsavam of the newly built temple was done in Jan 2005.
Jaganmatha Sri VANADURGA, the powerful deity of the temple is now attracting a large no of devotees from all corners to offer prayers thereby to fulfill their wishes. Subsidiary deities in the temple are Sri Mahaganapathi and Sri Shastara. There is a powerful Nagasannidhi near temple. There are ample evidences to show that Sri Vanadurga has bestowed full grace on the devotees for the following prayers-marriage alliance, health and wealth, education, jobs, purchase and sale of properties, protection from evil effects, accidents, and life threatening diseases.
|| ಹೇಮ ಪ್ರಖ್ಯಾಮಿಂದು ಖಂಡಾತ್ತ ಮೌಲಿಂ ಶಂಖಾರಿಷ್ಠಾಭೀತಿ ಹಸ್ತಾಂತ್ರಿಣೇ ತ್ರಾಂ
ಹೇಮಾಬ್ಜಸ್ಥಾಂ ಪೀತವಸ್ತ್ರಾಂ ಪ್ರಸನ್ನಾಂ ದೇವೀಂ ದುರ್ಗಾಂ ದಿವ್ಯರೂಪಾಂ ನಮಾಮಿ ||
ಸಮಸ್ತ ಜೀವಿಗಳ ಬುದ್ಧಿ, ನಿದ್ದೆ, ಹಸಿವು, ಬಾಯಾರಿಕೆ, ಶಕ್ತಿ, ಭಕ್ತಿ, ಶಾಂತಿ. ಭ್ರಾಂತಿ, ಕ್ಷಮೆ, ದಯೆ, ಸ್ಮೃತಿ, ತುಷ್ಠಿ, ಪುಷ್ಠಿ, ಮಾತೃಛಾಯೆ ಹೀಗೆ ಸಕಲವೂ ಜಗನ್ಮಾತೆಯ ಅನುನಯದಿಂದ ಉದಿಸಲ್ಪಟ್ಟಿದೆ. ನಿರ್ಗುಣಳೂ, ಸುಗುಣಳೂ, ಸಾಕಾರಳೂ, ನಿರಾಕಾರಳೂ, ಸರ್ವ ಮಂಗಳ ಸ್ವರೂಪಳೂ, ಶಿವೆಯೂ, ಸರ್ವಾರ್ಥ ಸಾಧಕಳೂ, ತ್ರಿನೇತ್ರಳೂ, ಶರಣಾಗತ ವತ್ಸಲಳೂ, ನಾರಾಯಣ ಪ್ರಿಯೆಯೂ, ಮನೋರಥಗಳನ್ನು ಈಡೇರಿಸುವವಳೂ, ಸಮಸ್ತ ರೋಗ ಹರಣಳೂ, ಬುದ್ಧಿಪ್ರದಾಯಳೂ, ಶುಭದಾಯಕಳೂ ಆದ ಶಕ್ತಿರೂಪಿಣಿ ಶ್ರೀ ವನದುರ್ಗಾ ದೇವಿ ನೆಲೆಸಿರುವ ಕ್ಷೇತ್ರವೇ ದೇಂತಡ್ಕ.
ಈ ಅಪೂರ್ವ ವನಸಿರಿಯ ಮಧ್ಯೆ ಕಂಗೊಳಿಸುವ ದೇಂತಡ್ಕ ಪರಿಸರದಲ್ಲಿ ಅಗೋಚರವಾಗಿದ್ದ ವನದುರ್ಗಾ ದೇವಿಯು ಆದ್ಯಾತ್ಮಿಕ ಚಿಂತಕರೋರ್ವರ ಮನಸ್ಸಿಗೆ ಪ್ರೇರಣೆ ನೀಡಿ, ಆ ಮೂಲಕ ಇಡೀ ಊರನ್ನೇ ಜಾಗೃತಗೊಳಿಸಿ ತನ್ನ ಅತ್ಯದ್ಭುತ ಕಾರಣೀಕ ಹಾಗೂ ಅನುಗ್ರಹದೊಂದಿಗೆ ಮರೆಯಾಗಿದ್ದ ದೇವಸ್ಥಾನವನ್ನು ಮತ್ತೆ ವಿಜೃಂಭಿಸುವಂತೆ ಮಾಡಿ ಲೋಕಕ್ಕೆ ತನ್ನ ಇರವನ್ನು ಸಾರಿದ್ದಾಳೆ.
ಕರಾವಳಿಯ ಸುಂದರ ಜಿಲ್ಲೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ, ಪೇರಮುಗ್ರು ಪರಿಸರದ ದೇಂತಡ್ಕ ದೇವಸ್ಥಾನ ಸ್ಥಳವು ಸುಮಾರು 2001ರವರೆಗೂ ಅಗೋಚರವಾಗಿಯೇ ಇದ್ದಿತು. ಈ ಮೊದಲೇ ಹೇಳಿದಂತೆ ದೇವಿಯ ದಿವ್ಯ ಸಂಕಲ್ಪದಿಂದ ದೇವಸ್ಥಾನದ ಪಳೆಯುಳಿಕೆಗಳೂ, ವಿಗ್ರಹ ಇತ್ಯಾದಿ ಕುರುಗಳೂ ಪತ್ತೆಯಾದವು. ಮುಂದಿನ ದಿನಗಳಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠಾದೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಗೌರವಾಧ್ಯಕ್ಷತೆ ಹಾಗೂ ಅನುಗ್ರಹ, ಊರ ಪರವೂರ ಆಸ್ತಿಕ ಭಕ್ತರ ಸಹಕಾರದೊಂದಿಗೆ ದೇವಸ್ಥಾನ ಸಂಪೂರ್ಣವಾಗಿ ಪುನರ್ನಿರ್ಮಾಣಗೊಂಡು, ಜನವರಿ 2005ರಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಜರುಗಿ, ಇದೀಗ ವನದುರ್ಗಾ ಮಾತೆಗೆ ಮೂರು ಹೊತ್ತು ವೈದಿಕ ವಿಧಿ ವಿಧಾನಗಳೊಂದಿಗೆ ನಿತ್ಯಪೂಜೆ ನಡೆದು ಬರುತ್ತಿದೆ. ಶ್ರೀಕ್ಷೇತ್ರದಲ್ಲಿ ಪರಿವಾರ ದೇವರುಗಳಾದ ಗಣಪತಿ ಹಾಗೂ ಶಾಸ್ತಾರ ದೇವರುಗಳೊಡನೆ ಶ್ರೀ ನಾಗಸನ್ನಿಧಿಯೂ ಇದ್ದು, ಪೂಜಾಕ್ರಮಗಳನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರದೈವಗಳಾಗಿ ರಕ್ತೇಶ್ವರಿ, ವಾರಾಹಿಗಳಿದ್ದು, ಜಾತ್ರೋತ್ಸವದ ಸಂಧರ್ಭದಲ್ಲಿ ಗ್ರಾಮ ದೈವಗಳಾದ ಧೂಮಾವತಿ, ಮಲರಾಯ ಭಂಡಾರ ಬಂದು ನೇಮೋತ್ಸವವೂ ಜರಗುತ್ತದೆ. ಶ್ರೀ ದೇವಿಯ ಸನ್ನಿಧಿಯಲ್ಲಿ ವೈವಾಹಿಕ ಬಂಧನ, ಸಂತಾನಾಪೇಕ್ಷೆ, ಆರೋಗ್ಯ ಭಾಗ್ಯ, ವ್ಯಾಪಾರ, ಧನ-ಧಾನ್ಯ ಸಂಪತ್ತು ಹೀಗೆ ಬದುಕಿನ ಸಕಲ ಇಷ್ಟಾರ್ಥಗಳ, ಕಷ್ಟಗಳ ಕುರಿತು ಪ್ರಾರ್ಥನೆ ಸಲ್ಲಿಸಿ, ಯಥೋಚಿತ ಸೇವೆ ಕೈಗೊಂಡರೆ ಅವು ಕೈಗೂಡುತ್ತವೆ ಎಂಬುದು ಭಕ್ತಾದಿಗಳ ಅಚಲ ನಂಬಿಕೆ, ಮಾತ್ರವಲ್ಲ ಅನುಭವವೂ ಕೂಡ.
ಕಾಮಿತಾರ್ಥಪ್ರದಾತಳೂ, ಮಂಗಳಸ್ವರೂಪಳೂ, ಚೈತನ್ಯರೂಪಳೂ. ಶುಭದಾಯಕಳೂ, ಮೋಕ್ಷಪ್ರದಾತೆಯೂ ಆದ ಶ್ರೀ ವನದುರ್ಗೆಯನ್ನು ಮನಸಾರೆ ನಂಬಿ ಆಶ್ರಯಿಸಿದವರಿಗೆ ಆಪತ್ತಿಲ್ಲ!
|| ಯಾ ದೇವಿ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ ನಮಸ್ತಸ್ಯೈ, ನಮಸ್ತಸ್ಯೈ, ನಮೋ ನಮಃ ||