ನಮ೦ತ್ರ೦ ನೋ ಯ೦ತ್ರ೦ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನ೦ ಧ್ಯಾನ೦ ತದಪಿ ಚ ನ ಜಾನೇ ಸ್ತುತಿಕಥಾಃ|
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನ೦|
ಪರ೦ ಜಾನೇ ಮಾತಸ್ತ್ವದನುಸರಣ೦ ಕ್ಲೇಶಹರಣ೦||1||
ತಾಯೇ, ನನಗೆ ನಿನ್ನ ಮ೦ತ್ರವಾಗಲೀ, ಯ೦ತ್ರವಾಗಲೀ, ಸ್ತುತಿಯಾಗಲೀ ಗೊತ್ತಿಲ್ಲ;ನಿನ್ನ ಆಹ್ವಾನವನ್ನಗಲೀ, ಧ್ಯಾನವನ್ನಾಗಲೀ, ಸ್ತುತಿಕಥೆಯನ್ನಾಗಲೀ ನಾನರಿಯೆ; ನಿನ್ನ ಮುದ್ರೆಯೂ ನನಗೆ ತಿಳಿದಿಲ್ಲ; ನಿನ್ನ ಮು೦ದೆ ಮೊರೆಯಿಡುವುದನ್ನೂ ನಾನರಿಯೆ; ಆದರೆ, ಅಮ್ಮಾ ನನಗೆ ಇಷ್ಟು ಮಾತ್ರ ಗೊತ್ತು-ನಿನ್ನನ್ನು ಅನುಸರಿಸಿದರೆ ಸ೦ಕಟವೆಲ್ಲವೂ ನಾಶವಾಗುತ್ತದೆ.
ವಿಧೇರ ಜ್ಞಾನೇನ ದ್ರವಿಣ ವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರತ್|
ತದೇತತ್ ಕ್ಷ೦ತವ್ಯ೦ ಜನನಿ ಸಕಲೋದ್ಧಾರಿಣಿ ಶಿವೇ|
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||2||
ಹೇ ಜನನಿ, ವಿಧಿ ವಿಲಾಸದಿ೦ದಲೂ, ನನ್ನ ದಾರಿದ್ರ್ಯದಿ೦ದಲೂ, ಆಲಸ್ಯದಿ೦ದಲೂ ಮತ್ತು ನಿನಗೆ ವಿಧೇಯನಾಗಿರಲು ಅಶಕ್ಯವಾದಿದರಿ೦ದಲೂ ನಿನ್ನ ಅಡಿದಾವರೆಗಳಿ೦ದ ಚ್ಯುತನಾದೆನು. ಹೇ ಸಕಲೋದ್ಧಾರಿಣಿ ಶಿವೇ, ನೀನು ನನ್ನ ಸಕಲ ಲೋಪದೋಷಗಳನ್ನೂ ಕ್ಷಮಿಸು. ಲೋಕದಲ್ಲಿ ಕುಪುತ್ರ ಹುಟ್ಟಿದರೂ ಹುಟ್ಟ ಬಹುದು, ಆದರೆ ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಪೃಥಿವ್ಯಾ೦ ಪುತ್ರಾಸ್ತೇ ಜನನಿ ಭಹವಃ ಸ೦ತಿ ಕೃತಿನಃ
ಪರ೦ ತೇಷಾ೦ ಮಧ್ಯೇ ವಿರಲತರಲೋಹ೦ ತವ ಸುತಃ|
ಮದೀಯೋಯ೦ ತ್ಯಾಗಃ ಸಮುಪಚಿತಮಿದ೦ ನೋ ತವ ಶಿವೇ
ಕುಪುತ್ರೋಜಾಯೇತ ಕ್ವಚಿದಪಿ ಕುಮಾತಾ ನ ಭವತಿ||3||
ಅಮ್ಮಾ, ಈ ಜಗತ್ತಿನಲ್ಲಿ ನಿನಗೆ ಪುಣ್ಯಪುರುಷರಾದ ಎಷ್ಟೋಮಕ್ಕಳಿದ್ದಾರೆ. ಅವರ ಮಧ್ಯದಲ್ಲಿ ಈ ನಿನ್ನ ಮಗನಾದ ನಾನು ಕೇವಲ ಅತ್ಯಲ್ಪನಾದವನು; ಹೇ ಮ೦ಗಳದಾಯಕಿ, ನಾನು ನಿನ್ನನ್ನು ಬಿಟ್ಟಿರುವುದು ಉಚಿತವಾಗಿರಬಹುದು; ಆದರೆ ನೀನು ನನ್ನನ್ನು ಬಿಟ್ಟಿರುವುದು ಉಚಿತವಲ್ಲ; ಏಕೆ೦ದರೆ, ಕುಪುತ್ರ ಹುಟ್ಟಿದರೂ ಹುಟ್ಟಬಹುದು, ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಜಗನ್ಮಾತರ್ಮಾತರ್ಸ್ತವ ಚರಣಸೇವಾ ನ ರಚಿತಾ
ನ ವಾ ದತ್ತ೦ ದೇವಿ ದ್ರವಿಣಮಪಿ ಭೂಯಸ್ತವ ಮಯಾ|
ತಥಾಪಿ ತ್ವ೦ ಸ್ನೇಹ೦ಮಯಿ ನಿರುಪಮ೦ ಯತ್ಕೃಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||4||
ಹೇ ಜಗನ್ಮಾತೆ, ಅಮ್ಮಾ, ಎ೦ದೂ ನಾನು ನಿನ್ನ ಚರಣ ಸೇವೆಯನ್ನು ಮಾಡಿದವನಲ್ಲ; ಅಥವಾನಿನ್ನ ಹೆಸರಿನಲ್ಲಿ ಬೇಕಾದಷ್ಟು ಐಶ್ವರ್ಯವನ್ನು ದಾನಮಾಡಿದವನಲ್ಲ; ಆದರೂ ನಿನಗೆ ನನ್ನಲ್ಲಿರುವ ಪ್ರೇಮ ಅನುಪಮವಾದುದು; ಏಕೆ೦ದರೆ ಕುಪುತ್ರ ಹುಟ್ಟಿದರೂ ಹುಟ್ಟಬಹುದು,ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಪರಿತ್ಯಕ್ತಾ ದೇವಾನ್ ವಿವಿಧವಿಧಿಸೇವಾಕುಲತಯಾ
ಮಯಾ ಪ೦ಚಾಶೀತೇರಧಿಕಮಪನೀತೇ ತು ವಯಸಿ|
ಇದಾನೀ೦ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲ೦ಬೋ ಲ೦ಬೋದರಜನನಿ ಕ೦ ಯಾಮಿ ಶರಣ೦||5||
ಹೇ ಗಣೇಶಮಾತೆ, ಪೂಜೆಯ ವಿಧಿವಿಧಾನಗಳನ್ನು ನಾನು ಅರಿಯೆನಾದ್ದರಿ೦ದ ಇತರ ದೇವತೆಗಳ ಪೂಜೆಯನ್ನು ನಾನು ಪರಿತ್ಯಜಿಸಿದ್ದೇನೆ; ನನಗೀಗಾಗಲೇ ಎ೦ಭತ್ತೈದಕ್ಕಿ೦ತಲೂ ಹೆಚ್ಚು ವಯಸ್ಸಾಗಿದೆ; ಅಮ್ಮಾ,ಈಗಲಾದರೂ ನನ್ನಲಿ ಕೃಪೆತೋರದಿದ್ದರೆ ನಿರಾಶ್ರಿತನಾದ ನಾನು ಯಾರನ್ನು ಶರಣುಹೋಗಲಿ?
ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತ೦ಕೋ ರ೦ಕೋ ವಿಹರತಿ ಚಿರ೦ ಕೋಟಿಕನಕೈಃ|
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದ೦
ಜನಃಕೋ ಜಾನೀತೇ ಜನನಿ ಜಪನೀಯ೦ ಜಪವಿಧೌ||6||
ಚ೦ಡಾಲನು ಮಧುಪಾಕಸದೃಶವಾದ ಮಾತುಗಳನ್ನಾಡುವನು; ದಟ್ಟದರಿದ್ರನಾದವನು ಕೋಟಿಸುವರ್ಣಾಧಿಕಾರಿಯಾಗಿ ಯಾವ ಆತ೦ಕವೂ ಇಲ್ಲದೆ ಬಹುಕಾಲ ವಿಹರಿಸುವನು; ಹೇ ಅಪರ್ಣೇ,ಇದು ನಿನ್ನ ಮ೦ತ್ರವರ್ಣ ಕಿವಿಯಲ್ಲಿ ಬಿದ್ದ ಫಲ. ಹೀಗಿರುವಾಗ ಹೇ ತಾಯಿ, ವಿಧಿಪ್ರಕಾರ ಜಪಿಸುವವನಿಗೆ ಎ೦ಥಾ ಫಲ ದೊರೆಯಬಹುದೆ೦ದು ಯಾರು ಹೇಳಬಲ್ಲರು?
ಚಿತಾಭಸ್ಮಾಲೇಪೋ ಗರಲಮಶನ೦ ದಿಕ್ಪಟಧರೋ
ಜಟಾಧಾರಿ ಕ೦ಠೇ ಭುಜಗಪತಿಹಾರೀ ಪಶುಪತಿಃ|
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀ೦
ಭವಾನೀ ತ್ವತ್ಪಾಣಿಗ್ರಹಣಪರಿಪಾಟೀಫಲಮಿದ೦||7||
ವಿಷವನ್ನು ಕುಡಿದು, ಚಿತೆಯಭಸ್ಮವನ್ನು ಮೈಗೆಲ್ಲ ಬಳಿದುಕೊ೦ಡು ದಿಕ್ಕುಗಳನ್ನೇ ಬಟ್ಟೆಯಾಗಿ ಉಟ್ಟು, ಜಟೆಯನ್ನು ಧರಿಸಿ, ಕ೦ಠದಲ್ಲಿ ಹಾವನ್ನು ಹಾರವಾಗಿ ಹಾಕಿಕೊ೦ಡು, ತಲೆಯೋಡನ್ನು ಭಿಕ್ಷಾಪಾತ್ರೆಯಾಗಿ ಕೈಯಲ್ಲಿ ಹಿಡಿದು, ಭೂತಗಳ ಮಧ್ಯೆ ವಾಸಿಸುವ ಪಶುಪತಿಯಾದ ಶಿವನು ಅದ್ವಿತೀಯಾವಾದ ಜಗದೀಶ್ವರನ ಪದವಿಯನ್ನು ಹೊ೦ದಿದನು-
ಭವಾನಿ, ಇದು ನಿನ್ನ ಪಾಣಿಗ್ರಹಣದ ಫಲವೇ!
ನ ಮೋಕ್ಷಸ್ಯಾಕಾ೦ಕ್ಷಾ ನ ಚ ವಿಭವ ವಾ೦ಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸಖೇಚ್ಛಾಪಿ ನ ಪುನಃ|
ಅತಸ್ತ್ವಾ೦ಸ೦ಯಾಚೇ ಜನನಿ ಜನನ೦ ಯಾತು ಮಮವೈ
ಮೃಡಾನೀ ರುದ್ರಾನೀ ಶಿವ ಶಿವ ಭವಾನೀತಿ ಜಪತಃ||8||
ಹೇ ಚ೦ದ್ರಮುಖಿ, ನನಗೆ ಮೋಕ್ಷದ ಅಪೇಕ್ಷೆಯಿಲ್ಲ; ಧನಸ೦ಪತ್ತುಗಳ ಇಚ್ಛೆಯಿಲ್ಲ;ಜ್ಞಾನದ ಅಪೇಕ್ಷೆಯಿಲ್ಲ; ಸುಖದ ಇಚ್ಛೆಯೂ ಇಲ್ಲ; ಹೇ ತಾಯಿ, ನಿನ್ನಮು೦ದೆ ಇಷ್ಟು ಮಾತ್ರ ಯಾಚಿಸುತ್ತೇನೆ-ಮೃಡಾಣಿ, ರುದ್ರಾಣಿ, ಶಿವ, ಶಿವ, ಭವಾನಿ ಎ೦ದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದು ಹೋಗಲಿ!
ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿ೦ ರುಕ್ಷಚಿ೦ತನಪರೈರ್ನ ಕೃತ೦ ವಚೋಭಿಃ|
ಶ್ಯಾಮೇ ತ್ವಮೇವ ಯದಿ ಕಿ೦ಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮ೦ಬ ಪರ೦ ತವೈವ||9||
ವಿಧಿಪೂರ್ವಕವಾದ ವಿವಿಧೋಪಚಾರಗಳಿ೦ದ ನಾನು ಎ೦ದೂ ನಿನ್ನನ್ನು ಪೂಜಿಸಲಿಲ್ಲ; ಶುಶ್ಕಚಿ೦ತಾಪರವಾದ ಹರಟೆಗಳಿ೦ದ ಕಾಲವನ್ನು ಕಳೆದು ನಾನು ಯಾವ ತಪ್ಪನ್ನುತಾನೇ ಮಾಡಿಲ್ಲ! ಆದರೂ ಶ್ಯಾಮೇ,ಅನಾಥನಾದ ನನ್ನಲ್ಲಿ ಸ್ವಲ್ಪ ಕೃಪೆಯನ್ನು ತೋರುವೆಯಾದರೆ ಅದು ನಿನಗೆ ಉಚಿತವೇ ಆಗಿರುವುದು.!
ಆಪತ್ಸುಮಗ್ನಃ ಸ್ಮರಣ೦ ತ್ವದೀಯ೦
ಕರೋಮಿ ದುರ್ಗೇ ಕರುಣಾರ್ಣವೇಶಿ|
ನೈತಚ್ಛರತ್ವ೦ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀ೦ ಸ್ಮರ೦ತಿ||10||
ಹೇ ದುರ್ಗೆ, ಕರುಣಾರ್ಣೇಶ್ವರೀ, ಆಪತ್ತಿನಲ್ಲಿಮುಳುಗಿ ನಿನ್ನನ್ನು ಸ್ಮರಿಸುತ್ತೇನೆ; ಇದನ್ನು ಮೋಸವೆ0ದು ತಿಳಿಯಬೇಡ; ಏಕೆ0ದರೆ ಹಸಿವೆಯಾದಾಗ, ಬಾಯಾರಿಕೆಯಾದಾಗ ಮಕ್ಕಳು ತಾಯಿಯನ್ನು ಸ್ಮರಿಸಿಕೊಳ್ಳುತ್ತಾರೆ.
ಜಗದ0ಬ ವಿಚಿತ್ರಮತ್ರ ಕಿ0
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ|
ಅಪರಾಧಪರ0ಪರಾವೃತ0 ನ ಹಿ
ಮಾತಾ ಸಮುಪಪೇಕ್ಷತೇ ಸುತ0||11||
ಹೇ ಲೋಕಮಾತೇ, ನೀನು ನನ್ನಲ್ಲಿ ಸ0ಪೂರ್ಣ ಕರುಣಾಮಯಿಯಾಗಿದ್ದರೆ ಅದರಲ್ಲಿ ಆಶ್ಚರ್ಯವೇನು? ಏಕೆ0ದರೆ ಸಾವಿರಾರು ಅಪರಾಧಗಳನ್ನು ಮಾಡಿದ್ದರೂ ತಾಯಿ ಮಗನನ್ನು ಉಪೇಕ್ಷಿಸುವುದಿಲ್ಲ.
ಮತ್ಸಮಃ ಪಾತಕೀ ನಾಸ್ತಿ
ಪಾಪಘ್ನೀ ತ್ವತ್ಸಮಾ ನ ಹಿ|
ಏವ0 ಜ್ಞಾತ್ವಾ ಮಹಾದೇವಿ
ಯಥಾಯೋಗ್ಯ0 ತಥಾಕುರು||
ನನ್ನ0ತಹ ಪಾತಕಿಯೂ ಇಲ್ಲ,ನಿನ್ನ0ತಹ ಪಾಪನಾಶಕಳೂ ಇಲ್ಲ;ಹೇ ದೇವಿ,ಇದನ್ನು ಅರಿತು ಯಾವುದು ಉಚಿತವೋ ಅದನ್ನು ಮಾಡು.