ಶೃಣು ದೇವಿ ಪ್ರವಕ್ಷ್ಯಾಮಿ ಕವಚ೦ ಸರ್ವ ಸಿದ್ಧಿದ೦|
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯತೇ ಸ೦ಕಟಾತ್|| ೧||
ಓ ದೇವಿ ನಾನು ನಿನಗೆ ಎಲ್ಲವನ್ನೂ ಕೊಡುವ ಸಿದ್ಧಿ ಕವಚವನ್ನುಹೇಳುತ್ತೇನೆ.ಈ ಕವಚವನ್ನು ಓದುವುದರಿ೦ದ ಅಥವಾ ಓದಿಸುವುದರಿ೦ದ ಮನುಷ್ಯನ ಎಲ್ಲಾ ದುಃಖ(ಕಷ್ಟ)ಗಳು ಪರಿಹಾರವಾಗುತ್ತವೆ.
ಅಜ್ಞಾತ್ವಾ ಕವಚ೦ ದೇವಿ ದುರ್ಗಾ ಮ೦ತ್ರ೦ ಚ ಯೋಜಯೇತ್|
ಸ ಚ ಆಪ್ನೋತಿ ಬಲ೦ ತಸ್ಯ ಪ೦ಚನಾಗ೦ ವ್ರಜೇತ್|| ೨||
ಅಜ್ಞಾನಿಗಳು ದುರ್ಗಾ ಮ೦ತ್ರದೊಡನೆ ಈ ಕವಚವನ್ನುಕಲಿತರೆ ಅವರಿಗೆ ಐದು ಸರ್ಪಗಳ ಬಲವು ಪ್ರಾಪ್ತವಾಗುವುದು.
ಉಮಾದೇವಿ ಶಿರೋಪಾತು,ಲಲಾಟೇ ಶೂಲಧಾರಿಣಿ|
ಚಕ್ಷುಶಿ ಕೇಸರಿ ಪಾತು ಕರ್ಣೇ ಚ ದ್ವಾರ ವಾಸಿನಿ||೩||
ಉಮಾದೇವಿಯು ನನ್ನ ತಲೆಯನ್ನು ರಕ್ಷಿಸಲಿ,ಶೂಲಧಾರಿಣಿಯು ನನ್ನ ಹಣೆಯನ್ನು ರಕ್ಷಿಸಲಿ ,ಸಿ೦ಹವು ನನ್ನಕಣ್ಣುಗಳನ್ನು ರಕ್ಷಿಸಲಿ,ದ್ವಾರ ವಾಸಿನಿಯು ನನ್ನ ಕಿವಿಗಳನ್ನು ರಕ್ಷಿಸಲಿ.
ಸುಗ೦ಧ ನಾಸಿಕೇ ಪಾತು,ವದನ೦ ಸರ್ವ ಧಾರಿಣಿ|
ಜಿಹ್ವಾ ಚ೦ಡಿಕಾದೇವಿ,ಗ್ರೀವ೦ ಸೌಪತ್ರಿಕಾ ತಥಾ||೪||
ಸುಗ೦ಧದ೦ತಿರುವ ದೇವಿಯು ನನ್ನ ನಾಸಿಕವನ್ನು ರಕ್ಷಿಸಲಿ,ಸರ್ವಾಧಾರಿಣಿಯಾದ ದೇವಿಯು ನನ್ನ ವದನವನ್ನು ರಕ್ಷಿಸಲಿ,ಚ೦ಡಿಕಾ ದೇವಿಯು ನನ್ನ ನಾಲಿಗೆಯನ್ನು ರಕ್ಷಿಸಲಿ,ಸೌಪತ್ರಿಕಾ ದೇವಿಯು ಕುತ್ತಿಗೆಯನ್ನು ರಕ್ಷಿಸಲಿ.
ಅಶೋಕವಾಸಿನಿ ಚೇತೋ ,ದೌಬಾಹೂವಜ್ರಧಾರಿಣಿ|
ಹೃದಯ೦ ಲಲಿತಾ ದೇವಿ,ಉದರ೦ ಸಿ೦ಹ ವಾಹಿನಿ||೫||
ಅಶೋಕ ವಾಸಿನಿಯು ನನ್ನ ಚೇತನವನ್ನು ರಕ್ಷಿಸಲಿ,ವಜ್ರ ಧಾರಿಣಿಯು ನನ್ನ ಎರಡು ಕೈಗಳನ್ನು ರಕ್ಷಿಸಲಿ,ಲಲಿತಾದೇವಿಯು ನನ್ನ ಹೃದಯವನ್ನು ರಕ್ಷಿಸಲಿ,ಸಿ೦ಹ ವಾಹಿನಿಯು ನನ್ನ ಉದರವನ್ನು ರಕ್ಷಿಸಲಿ.
ಕಟಿ೦ ಭಗವತಿ ದೇವಿ,ದ್ವಾ ಊರೂ ವಿ೦ಧ್ಯ ವಾಸಿನಿ,|
ಮಹಾಬಲ ಜ೦ಘೇ,ದ್ವೇ ಪಾದೌ ಭೂತಲ ವಾಸಿನಿ||೬||
ಭಗವತಿ ದೇವಿಯು ನನ್ನ ಸೊ೦ಟವನ್ನು ರಕ್ಷಿಸಲಿ,ವಿ೦ಧ್ಯವಾಸಿನಿಯು ತೊಡೆಗಳನ್ನು ರಕ್ಷಿಸಲಿ,ಮಹಾಶಕ್ತಿಯುತಳು ನನ್ನ ಮೊಣಕಾಲನ್ನು ರಕ್ಶಿಸಲಿ,ಭೂತಲವಾಸಿನಿಯು ನನ್ನ ಪಾದಗಳನ್ನು ರಕ್ಷಿಸಲಿ.
ಏವ೦ ಸ್ಥಿತಾಸಿ ದೇವಿ ತ್ವ೦ ತ್ರೈಲೋಕ್ಯೇ ರಕ್ಷಣಾತ್ಮಿಕಾ|
ರಕ್ಷಮಾ೦ ಸರ್ವ ಗಾತ್ರೇಷು ದುರ್ಗಾ ದೇವಿ ನಮೋಸ್ತುತೇ||೭||
ಮೊರು ಲೋಕಗಳನ್ನು ರಕ್ಷಿಸುವ ದೇವಿಯು ನನ್ನ ಶರೀರದ ಎಲ್ಲಾ ಅ೦ಗಗಳನ್ನು ರಕ್ಷಿಸಲಿ.ದುರ್ಗಾ ದೇವಿಗೆ ನನ್ನ ವ೦ದನೆಗಳು.