+91 8255 262 062, 9964 157 352 info@vanadurga.in

ಅನ್ನದಾನದ ಮಹತ್ವ

ಅನ್ನ ದಾನ೦ ಸಮ೦ ದಾನ೦ ತ್ರಿಲೋಕೇಷು ನ ವಿಧತೇ| -ಇದು ವೇದೋಕ್ತಿ.ಎ೦ದರೆ ಅನ್ನದಾನಕ್ಕೆ ಸಮನಾದ ದಾನವು ಬೇರೊ೦ದಿಲ್ಲ. ಇದು ಅತ್ಯ೦ತ ಶ್ರೇಷ್ಟ ದಾನವು.
ಎಲ್ಲಾ ಮಾನವರ ಮೂಲಭೂತ ಅವಶ್ಯಕತೆ ಅನ್ನ-ಈ ವಿಶ್ವದ ಉತ್ಪತ್ತಿ ಮತ್ತು ಬೆಳವಣಿಗೆ ಅನ್ನವನ್ನು ಆಧರಿಸಿದೆ.ವೇದಗಳಲ್ಲಿ ಹೇಳಿದ೦ತೆ ಹಸಿದವರಿಗೆ ಮಾಡುವ ಅನ್ನ ದಾನದಿ೦ದ ಪುಣ್ಯಲೋಕ ಪ್ರಾಪ್ತಿಯಾಗುವುದು. ಸಕಲ ಜೀವ ರಾಶಿಗಳಿಗೆ ಶಕ್ತಿಯನ್ನು ಕೊಡುವುದೇ ಅನ್ನ. ಅದಕ್ಕಾಗಿಯೇ ಶ೦ಕರಾಚಾರ್ಯರು ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯನ್ನು “ಅನ್ನಪೂರ್ಣೇ ಸದಾಪೂರ್ಣೇ ಶ೦ಕರ ಪ್ರಾಣವಲ್ಲಭೇ” ಎ೦ದು ಸ್ತುತಿಸಿದ್ದಾರೆ.
ಮಹಾಭಾರತದಲ್ಲಿ ಶ್ರೀಕೃಷ್ಣನು (ಶಾ೦ತಿ ಪರ್ವದಲ್ಲಿ) ಭೀಷ್ಮನಿಗೆ ದಾನದ ಮಹತ್ವದ ಬಗ್ಗೆ ಈ ರೀತಿ ಹೇಳುತ್ತಾನೆ :
ಈ ಚರಾಚರ ಪ್ರಪ೦ಚವು ಅನ್ನದಿ೦ದ ಆಧರಿಸಲ್ಪಟ್ಟಿದೆ.ಯಾವನು ಆಹಾರವನ್ನು ಕೊಡುತ್ತಾನೋ ಅವನು ಜೀವನವನ್ನು ಕೊಟ್ಟ೦ತೆ.ಆದ್ದರಿ೦ದ ಯಾರು ಈ ಲೋಕ ಮತ್ತು ಪರಲೋಕದಲ್ಲಿ ಸುಖದಿ೦ದ ಇರಲು ಬಯಸುತ್ತಾನೋ ಅವನು ಅನ್ನ(ಆಹಾರ)ವನ್ನು ದಾನ ಮಾಡಲು ಪ್ರಯತ್ನಿಸ ಬೇಕು.ಈ ಆಹಾರವನ್ನು ಸೌಜನ್ಯತೆಯಿ೦ದ ಪ್ರಾಯಸ್ಥರಿಗೆ,ಅಶಕ್ತರಿಗೆ,ಮಕ್ಕಳಿಗೆ ಮತ್ತು ಪ್ರಯಾಣಿಕರಿಗೆ ಕೊಡಬೇಕು.
ವರಾಹ ಪುರಾಣದಲ್ಲಿ ಈ ರೀತಿ ಹೇಳಿದೆ:
ಯಾರು ಆಹಾರವನ್ನು ದಾನ ಮಾಡುತ್ತಾನೋ ಅವನು ಈ ಜಗತ್ತಿನಲ್ಲಿ ಅತ್ಯ೦ತ ಶ್ರೇಷ್ಠ ದಾನ ಮಾಡಿದ೦ತೆ
ತೈತ್ತಿರೀಯ ಉಪನಿಷತ್ತಿನಲ್ಲಿ:
ಮನೆ ಬಾಗಿಲಿಗೆ ಹಸಿದು ಬ೦ದವನನ್ನು ಸೌಜನ್ಯದಿ೦ದ ಊಟ ಹಾಕದೆ ಕಳುಹಿಸಬೇಡಿ
-ಎ೦ದಿದೆ.
ಅನ್ನ೦ ವೈ ಪ್ರಾಣಃ| ಅನ್ನ೦ ಬಹು ಕುರ್ವೀತ|-ಎಲ್ಲಾ ಜೀವಿಗಳು ಅನ್ನದಿ೦ದ ಹುಟ್ಟಿ ಪೋಷಿಸಲ್ಪಡುತ್ತವೆ. ಅನ್ನವು ಸಮೃದ್ಧಿಯಾಗಲಿ
ಭಗವದ್ಗೀತೆಯಲ್ಲಿ :
ಅನ್ನಾತ್ ಭವ೦ತಿ ಭೂತಾನಿ-ಎಲ್ಲಾ ಜೀವಿಗಳು ಅನ್ನದಿ೦ದ ವಿಕಾಸವಾಗುತ್ತವೆ.ಎಲ್ಲಾ ದೇವ ದೇವತೆಗಳು ಕ್ರಮಬದ್ಧವಾದ ಅನ್ನ ದಾನದಿ೦ದ ಸ೦ಪ್ರೀತರಾಗುತ್ತಾರೆ.
ಅನ್ನ ದಾನವು ಶಕ್ತಿಯನ್ನು ಕೊಡುವುದರೊ೦ದಿಗೆ ಬೌದ್ಧಿಕತೆಯನ್ನು,ದಿವ್ಯ ಚೈತನ್ಯವನ್ನು ದಾನಿಗಳಿಗೂ,ಪಡೆಯುವವರಿಗೂ ನೀಡುತ್ತದೆ.
ಸುಖಮಕ್ಷ್ಯ್ಯಯ್ಯಮನ್ನದಃ-ಅನ್ನ ದಾನವು ಅಕ್ಷಯವಾದ ಸುಖವನ್ನು ಕೊಡುವುದು.
ಬ್ರಹ್ಮ ಹತ್ಯಾಕೃತ೦ ಪಾಪ೦ ಅನ್ನ ದಾನಾತ್ ಪ್ರಣಶ್ಯತಿ-ಮಹಾ ಪಾತಕವನ್ನು,ಪಾಪವನ್ನು ಅನ್ನ ದಾನವು ತೊಳೆದು ಹಾಕುವುದು.
ಅನ್ನ ದಾನದಿ೦ದ ತೃಪ್ತಿ: ಬೇರೆ ಯಾವುದೇ ದಾನಗಳಿ೦ದ ದಾನ ಸ್ವೀಕರಿಸುವವನಿಗೆ ತೃಪ್ತಿಯಾಗಲಾರದು. ಇನ್ನೂ ಬೇಕೆ೦ಬ ಹ೦ಬಲವು ಉಳಿಯುವುದು. ಆದರೆ ಅನ್ನವನ್ನು ತೃಪ್ತಿ ಪಡುವಷ್ಟು ಕೊಟ್ಟಲ್ಲಿ ಇನ್ನೂ ಜಾಸ್ತಿ ಕೊಡುವೆನೆ೦ದರೂ,ಸ್ವೀಕರಿಸುವವನು ಬೇಡವೆ೦ದು ಕೈಯಿ೦ದ ವ್ಯಕ್ತ ಪಡಿಸುವನು.
ಭೃಗುವಲ್ಲಿಯಲ್ಲಿ ಅನ್ನದ ಬಗ್ಗೆ ಈ ರೀತಿ ಹೇಳಿದೆ:
ಅನ್ನ೦ ನ ನಿ೦ದ್ಯಾತ್ | ತದ್ ವೃತಮ್|
ಪ್ರಾಣೋ ವಾ ಅನ್ನ೦| ಶರೀರ ಮನ್ನಾದಮ್|
ಪ್ರಾಣೇ ಶರೀರ೦ ಪ್ರತಿಷ್ಟಿತಮ್| ಶರೀರೇ ಪ್ರಾಣಃ ಪ್ರತಿಷ್ಠಿತಃ| ತದೇದನ್ನಮನ್ನೇ ಪ್ರತಿಷ್ಠಿತಮ್
– ಅನ್ನವನ್ನು ದೂಷಿಸ ಬಾರದು(ಹಾಳು ಮಾಡಬಾರದು) ಇದನ್ನು ವೃತವಾಗಿ ಸ್ವೀಕರಿಸು. ಶರೀರ ಮತ್ತು ಪ್ರಾಣಗಳು ಅನ್ನದಿ೦ದ ಮಾಡಲ್ಪಟ್ಟಿವೆ.ಶರೀರ ಪ್ರಾಣಗಳು ಒಟ್ಟಾಗಿವೆ.ಎಲ್ಲವೂ ಅನ್ನದಲ್ಲೇ ಅಡಗಿವೆ.
ಅನ್ನ ದಾನಕ್ಕೆ ಸರಿ ಸಾಟಿಯಿಲ್ಲ:
ಗಜ ತುರಗ ಸಹಸ್ರಮ್|
ಗೋಕುಲ೦ ಕೋಟಿ ದಾನ೦|
ಕನಕ ರಜತ ಪಾತ್ರ೦|
ಮೇದಿನಿ ಸಾಗರ೦ತಾಮ್|
ಉಪಯ ಕುಲ ವಿಶುತ್ತ೦|
ಕೋಟಿ ಕನ್ಯಾ ಪ್ರದಾನ೦|
ನಹಿ ನಹಿ ಬಹು ದಾನ೦|
ಅನ್ನ ದಾನ೦ ಸಮಾನ೦||
-ಅರ್ಥ-ಸಾವಿರ ಆನೆ ಕುದುರೆಗಳ ದಾನ, ಕೋಟಿ ಹಸುಗಳ ದಾನ, ಚಿನ್ನ ಬೆಳ್ಳಿ ಪಾತ್ರೆಗಳ ದಾನ, ಸಮುದ್ರದ ತನಕವೂ ಭೂಮಿ ದಾನ, ಬ೦ಧು ಬಾ೦ಧವವರ ಸೇವೆ, ಕೋಟಿ ಕನ್ಯಾ ದಾನ – ಇದು ಯಾವುದೂ ಅನ್ನದಾನಕ್ಕೆ ಸರಿ ಸಾಟಿಯಾಗಲಾರದು.
ಅನ್ನ ಪೂರ್ಣೆಯ ಸ್ತೋತ್ರ-
ಅನ್ನ ಪೂರ್ಣೇ ಸದಾ ಪೂರ್ಣೇ ಶ೦ಕರ ಪ್ರಾಣ ವಲ್ಲಭೇ|
ಜ್ಞಾನ ವೈರಾಗ್ಯ ಸಿಧ್ಯರ್ಥ೦ ಭಿಕ್ಷಾ೦ ದೇಹಿಮೆ ಪಾರ್ವತಿ||
~!!!!!!!!!!!~

Back To Top