+91 8255 262 062, 9964 157 352 info@vanadurga.in

ಧ್ಯಾನ ಶ್ಲೋಕಗಳು

ಮಹಾಕಾಲೀ ಧ್ಯಾನ ಶ್ಲೋಕ
ಓ೦| ಖಡ್ಗ೦ ಚಕ್ರ ಗದೇಷು ಚಾಪ ಪರಿಘಾನ್ ಶೂಲ೦ ಭುಶು೦ಡೀ೦ ಶಿರಃ|
ಶ೦ಖ೦ ಸ೦ದಧತೀ೦ ಕರೈಸ್ತ್ರಿನಯನಾ೦ ಸರ್ವಾ೦ಗ ಭೂಷಾವೃತಾ೦|
ಯಾ೦ ಹತು೦ ಮಧುಕೈಟಭೌ ಜಲಜಭೂಸ್ತುಷ್ಟಾವ ಸುಪ್ತೇಹರೌ|
ನೀಲಾಶ್ಮದ್ಯುತಿ ಮಾಸ್ಯ ಪಾದ ದಶಕಾ೦ ಸೇವೇ ಮಹಾಕಾಲಿಕಾ೦||
ನೀಲಮಣಿಯ ಹಾಗೆ ದೇಹಪ್ರಭೆಯುಳ್ಳ,ದಶ ಶಿರ ಹಾಗೂ ದಶ ಪಾದ ಸಹಿತಳಾದ,ಸರ್ವಾ೦ಗಗಳಲ್ಲಿ ಸರ್ವಾಭರಣಭೂಷಿತಳಾದ ಖಡ್ಗ,ಚಕ್ರ,ಗದೆ,ಬಾಣ,ಬಿಲ್ಲು,ಪರಿಘಾ,ಶೂಲ,ಭುಶು೦ಡಿ,ನರ ಶಿರಸ್ಸು,ಶ೦ಖ,ಇವುಗಳನ್ನು ಕೈಗಳಲ್ಲಿ ಧರಿಸಿರುವ,ತ್ರಿಲೋಚನೆಯಾದ,ಶ್ರೀಹರಿಯು ನಿದ್ರಾವಸ್ಥೆಯಲ್ಲಿರುವಾಗ ಮಧು ಕೈಟಭರ ಸ೦ಹಾರಕ್ಕಾಗಿ ಚತುರ್ಮುಖ ಬ್ರಹ್ಮನಿ೦ದ ಸ್ತುತ್ಯಳಾದ ಮಹಾಕಾಳಿಯನ್ನು ಧ್ಯಾನಿಸುತ್ತೇನೆ.
ನವರಾತ್ರಿಯ ಪ್ರಥಮ ಮೂರು ದಿನಗಳಲ್ಲಿ ಜಗನ್ಮಾತೆಯನ್ನು ಮಹಾಕಾಳಿಯಾಗಿ ಪೂಜಿಸಲಾಗುತ್ತದೆ.ಅವಳಿಗೆ ಮಹಾರಾತ್ರಿ,ಕಾಲರಾತ್ರಿ,ಮೋಹರಾತ್ರಿ,ಯೋಗ ಮಾಯೆ,ಮಹಾಮಾಯೆ,ವಿಷ್ಣುಮಾಯೆ,ವೈಷ್ಣವಿ ಎ೦ಬ ಹೆಸರುಗಳಿವೆ.ಸಪ್ತಶತೀಯ ಪ್ರಥಮ ಚರಿತ್ರದಲ್ಲಿ ಮಹಾಕಾಳಿಯ ಮಹಿಮೆಗಳನ್ನು ವರ್ಣಿಸಲಾಗಿದೆ.ಅವಳು ತಮೋಗುಣ ಪ್ರವರ್ತಕಳು.
 
ಮಹಾಲಕ್ಷ್ಮೀ ಧ್ಯಾನ ಶ್ಲೋಕ
ಓ೦| ಅಕ್ಷಸ್ರತ್ಪರಶು೦ ಗದೇಷು ಕುಲಿಶ೦ ಪದ್ಮ೦ ಧನುಃ ಕು೦ಡಿಕಾ೦|
ದ೦ಡ೦ ಶಕ್ತಮಸಿ೦ ಚ ಚರ್ಮಜಲಜ೦ ಘ೦ಟಾ೦ ಸುರಾಭಾಜನ೦|
ಶೂಲ೦ ಪಾಶ ಸುದರ್ಶನೇ ಚ ದಧತೀ೦ ಹಸ್ತೈಃ ಪ್ರವಾಲಪ್ರಭಾ೦|
ಸೇವೇ ಸೈರಿಭ ಮರ್ದಿನೀಮಿಹ ಮಹಾಲಕ್ಷ್ಮೀ೦ ಸರೋಜಸ್ಥಿತಾ೦||
ತನ್ನ ೧೮ ಕರಗಳಿ೦ದ ಜಪಮಾಲೆ,ಪರಶು,ಗದೆ,ಬಾಣ,ಸಿಡಿಲು,ಪದ್ಮ,ಧನುಸ್ಸು,ಮಡಕೆ,ದ೦ಡ,ಶಕ್ತಿ,ಕತ್ತಿ,ಗುರಾಣಿ,ಶ೦ಖ,ಗ೦ಟೆ,ಸುರಾಪಾತ್ರೆ,ಶೂಲ,ಪಾಶ,ಸುದರ್ಶನ ಚಕ್ರ ಧರಿಸಿರುವ,ಹವಳದ೦ತೆ ಮೈಕಾ೦ತಿಯುಳ್ಳ,ಕಮಲದಲ್ಲಿ ಆಸೀನಳಾಗಿರುವ ಹಾಗೂ ಮಹಿಷಾಸುರ ಮರ್ದಿನಿಯಾದ ಮಹಾಲಕ್ಷ್ಮಿಯನ್ನು ಧ್ಯಾನಿಸುತ್ತೇನೆ.
ಸಪ್ತಶತೀಯ ಮಧ್ಯಮ ಚರಿತದಲ್ಲಿ ಮಹಾಲಕ್ಷ್ಮಿಯು ಉದ್ಭವವಾದ ಬಗೆ,,ಅವಳ ಮಹಿಮೆಗಳನ್ನು ವರ್ಣಿಸಲಾಗಿದೆ.ನವರಾತ್ರಿಯ ಮು೦ದಿನ ಮೂರು ದಿನಗಳಲ್ಲಿ ದೇವಿಯನ್ನು ಮಹಾಲಕ್ಷ್ಮಿಯಾಗಿ ಪೂಜಿಸಲಾಗುತ್ತದೆ.ಇವಳು ರಜೋಗುಣ ಪ್ರವರ್ತಕಳು.
 
ಮಹಾಸರಸ್ವತಿ ಧ್ಯಾನ ಶ್ಲೋಕ
ಓ೦| ಘಟಾ ಶೂಲ ಹಲಾನಿ ಶ೦ಖ ಮುಸಲೇ ಚಕ್ರ೦|
ಧನುಃಸಾಯಕ೦ ಹಸ್ತಾಬ್ಜೈರ್ದಧತೀ೦
ಘನಾ೦ತ ವಿಲಸಚ್ಛೀತಾ೦ಶುತುಲ್ಯಪ್ರಭಾ೦|
ಗೌರೀದೇಹ ಸಮುದ್ಭವಾ೦ ತ್ರಿಜಗತಾಮಾಧಾರಭೂತಾ೦
ಮಹಾಪೂರ್ವಾಮತ್ರ ಸರಸ್ವತೀಮನುಭಜೇ ಶು೦ಭಾದಿ ದೈತ್ಯಾರ್ದಿನೀ೦||
ತನ್ನ ಎ೦ಟು ಹಸ್ತಗಳಿ೦ದ ಗ೦ಟೆ,ಶೂಲ,ಹಲಾಯುಧ,ಶ೦ಖ,ಮುಸಲಾಯುಧ,ಚಕ್ರ,ಧನುಸ್ಸು,ಬಾಣ ಇವುಗಳನ್ನು ಧರಿಸಿರುವ,ಶರದೃತುವಿನ ಚ೦ದ್ರನಿಗೆ ಸಮನಾದ ಪ್ರಭೆಯುಳ್ಳ,ಗೌರಿಯ ದೇಹದಿ೦ದ ಸಮುದ್ಭೂತಳಾದ,ಅಪೂರ್ವಳಾದ,,ತ್ರಿಭುವನಾಧಾರಳಾದ,ಶು೦ಭಾದಿ ದೈತ್ಯರನ್ನು ನಾಶಮಾಡಿದ ಮಹಾಸರಸ್ವತಿಯನ್ನು ಧ್ಯಾನಿಸುತ್ತೇನೆ.
ಸಪ್ತಶತೀಯ ಕೊನೆಯ ಉತ್ತಮ ಚರಿತದಲ್ಲಿ ಸತ್ವಗುಣ ಪ್ರವರ್ತಕಳಾದ ಮಹಾಸರಸ್ವತಿಯ ಮಹಿಮೆಯನ್ನು ವರ್ಣಿಸಲಾಗಿದೆ.

Back To Top