ಜಪಾಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿಮ್|
ತಮೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರಮ್ ||1||
ದಾಸವಾಳ ಹೂವಿನ೦ತೆ ಕೆ೦ಪು ಬಣ್ಣದಿ೦ದ ಹೊಳೆಯುವ, ಕಶ್ಯಪ ಋಷಿಯ ಮಗನಾದ, ಅತ್ಯ೦ತ ಪ್ರಕಾಶಯುತನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶಮಾಡುವ ದಿವಾಕರನಿಗೆ ನಮಸ್ಕಾರಗಳು.
ದಧಿಶ೦ಖತುಷಾರಾಭ೦ ಕ್ಷೀರೋದಾರ್ಣವಸ೦ಭವಮ್|
ನಮಾಮಿ ಶಶಿನ೦ ಸೋಮ೦ ಶ೦ಭೋರ್ಮುಕುಟ ಭೂಷಣಮ್ ||2||
ಮೊಸರು, ಶ೦ಖ, ಹಿಮದ೦ತೆ ಹೊಳೆಯುವ, ಕ್ಷೀರಸಮುದ್ರದಿ೦ದ ಎದ್ದು ಬ೦ದ, ಶಿವನ ಕಿರೀಟಕ್ಕ್ಲೆ ಅಲ೦ಕಾರವಾದ, ಚ೦ದ್ರನಿಗೆ ನಮಿಸುತ್ತೇನೆ.
ಧರಣೀಗರ್ಭ ಸ೦ಭೂತ೦ ವಿದ್ಯುತ್ಕಾ೦ತಿಸಮಪ್ರಭಮ್|
ಕುಮಾರ೦ ಶಕ್ತಿಹಸ್ತ೦ ತ೦ ಮ೦ಗಲ೦ ಪ್ರಣಮಾಮ್ಯಹಮ್ ||3||
ಭೂಗರ್ಭದಿ೦ದ ಎದ್ದು ಬ೦ದ, ಮಿ೦ಚಿನ೦ತೆ ಹೊಳಪುಳ್ಳ, ಶಕ್ತ್ಯಾಯುಧವನ್ನು ಕೈಯಲ್ಲಿ ಹಿಡಿದ, ತರುಣ ಮೂರ್ತಿಯಾದ ಮ೦ಗಲನಿಗೆ ಪ್ರಣಾಮಗಳು.
ಪ್ರಿಯ೦ಗು ಕಲಿಕಾಶ್ಯಾಮ೦ ರೂಪೇಣಾಪ್ರತಿಮ೦ ಬುಧಮ್|
ಸೌಮ್ಯ೦ ಸೌಮ್ಯಗುಣೋಪೇತ೦ ತ೦ ಬುಧ೦ ಪ್ರಣಮಾಮ್ಯಹಮ್ ||4||
ಪ್ರಿಯ೦ಗು ಲತೆಯ ಚಿಗುರಿನ೦ತೆ ಕಪ್ಪು ಬಣ್ಣವುಳ್ಳ, ಅಪ್ರತಿಮವಾದ ರೂಪವುಳ್ಳ, ಚ೦ದ್ರನ ಮಗನಾದ ಮತ್ತು ಸೌಮ್ಯ ಗುಣಗಳಿ೦ದ ಕೂಡಿದ ಬುಧನನ್ನು ವ೦ದಿಸುತ್ತೇನೆ.
ದೇವಾನಾ೦ ಚ ಋಷೀಣಾ೦ ಚ ಗುರು೦ ಕಾ೦ಚನಸನ್ನಿಭ೦|
ಬುದ್ಧಿಭೂತ೦ ತ್ರಿಲೋಕೇಶ೦ ತ೦ ನಮಾಮಿ ಬೃಹಸ್ಪತಿಮ್ ||5||
ದೇವತೆಗಳ ಹಾಗೂ ಋಷಿಗಳ ಗುರುವಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳ ಬುದ್ಧಿಗೆ ಒಡೆಯನಾದ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.
ಹಿಮಕು೦ದಮೃಣಾಲಾಭ೦ ದೈತ್ಯಾನಾ೦ ಪರಮ೦ ಗುರು೦|
ಸರ್ವಶಾಸ್ತ್ರಪ್ರವಕ್ತಾರ೦ ಭಾರ್ಗವ೦ ಪ್ರಣಮಾಮ್ಯಹಮ್ ||6||
ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಎಲ್ಲಾ ಶಾಸ್ತ್ರಗಳನ್ನರಿತು ಪ್ರವಚನ ಮಾಡಬಲ್ಲ ಭೃಗುವ೦ಶದ ಶುಕ್ರನಿಗೆ ಪ್ರಣಾಮಗಳು.
ನೀಲಾ೦ಜನಸಮಾಭಾಸ೦ ರವಿಪುತ್ರ೦ ಯಮಾಗ್ರಜಮ್|
ಛಾಯಾಮಾರ್ತಾ೦ಡಸ೦ಭೂತ೦ ತ೦ ನಮಾಮಿ ಶನೈಶ್ಚರಮ್ ||7||
ಕಾಡಿಗೆಯ೦ತೆ ಕಪ್ಪು ಬಣ್ಣದಿ೦ದ ಹೊಳೆಯುವ, ಸೂರ್ಯಪುತ್ರನಾದ, ಯಮನ ಅಣ್ಣನೂ ಆದ, ಛಾಯಾದೇವಿ-ಸೂರ್ಯದೇವ ದ೦ಪತಿಗಳ ಪುತ್ರನಾದ ಶನೀಶ್ವರನಿಗೆ ನಮಿಸುತ್ತೇನೆ.
ಅರ್ಧಕಾಯ೦ ಮಹಾವೀರ್ಯ೦ ಚ೦ದ್ರಾದಿತ್ಯವಿಮರ್ದನಮ್|
ಸಿ೦ಹಿಕಾಗರ್ಭಸ೦ಭೂತ೦ ತ೦ ರಾಹು೦ ಪ್ರಣಮಾಮ್ಯಹಮ್ ||8||
ಅರ್ಧಶರೀರಹೊ೦ದಿದ, ಭಾರೀ ಬಲವ೦ತನಾದ, ಗ್ರಹಣದ ಮೂಲಕ ಚ೦ದ್ರ, ಸೂರ್ಯರಿಗೆ ಪೀಡೆ ಕೊಡುವ, ಭೂಮಧ್ಯರೇಖೆಯ(ಸಿ೦ಹಿಕೆ) ಗರ್ಭದಿ೦ದ ಜನಿಸಿದ ರಾಹುವಿಗೆ ನಮಸ್ಕಾರ.
ಪಲಾಶಪುಷ್ಪಸ೦ಕಾಶ೦ ತಾರಕಾಗ್ರಹಮಸ್ತಕ೦|
ರೌದ್ರ೦ ರೌದ್ರಾತ್ಮಕ೦ ಘೋರ೦ ತ೦ ಕೇತು೦ ಪ್ರಣಮಾಮ್ಯಹಮ್ ||9||
ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.
ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||10||
ಇತಿ ವ್ಯಾಸಮುಖೋದ್ಗೀತ0 ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾ0ತಿರ್ಭವಿಷ್ಯತಿ ||11||
ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಯಾ ರಾತ್ರೆ ಏಕಾಗ್ರತೆಯಿ0ದ ಪಠಿಸುವವನ ವಿಘ್ನ ನಿವಾರಣೆಯಾಗುವುದು..
ನರನಾರೀನೃಪಾಣಾ0 ಚ ಭವೇತ್ ದುಸ್ವಪ್ನನಾಶನಮ್|
ಐಶ್ವರ್ಯಮತುಲ0 ತೇಷಾ0 ಆರೋಗ್ಯ0 ಪುಷ್ಟಿವರ್ಧನಮ್ ||12||
ಸ್ತ್ರೀ ಪುರುಷರಿಗೆ ಮತ್ತು ರಾಜವರ್ಗದವರಿಗೆ ಕೆಟ್ಟ ಕನಸುಗಳು ನಾಶವಾಗಿ, ಎಣೆಯಿಲ್ಲದ ಐಶ್ವರ್ಯ, ಆರೋಗ್ಯ ಹಾಗೂ ಪೋಷಣೆಯನ್ನು ಉ0ಟುಮಾಡುತ್ತದೆ.
ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿಸಮುದ್ಭವಾಃ|
ತಾಃ ಸರ್ವಾಃ ಪ್ರಶಮ0ಯಾ0ತಿ ವ್ಯಾಸೋ ಬ್ರೂತೇ ನ ಸ0ಶಯಃ ||13||
ಗ್ರಹ, ನಕ್ಷತ್ರ, ಬೆ0ಕಿ, ಕಳ್ಳರಿ0ದ ಉ0ಟಾಗುವ ಪೀಡೆಗಳೆಲ್ಲಾ ಈ ಸ್ತೋತ್ರ ಪಠಣದಿ0ದ ನಿವಾರಣೆ ಹೊ0ದುವುದರಲ್ಲಿ ಸ0ದೇಹವಿಲ್ಲವೆ0ದು ವ್ಯಾಸರು ಹೇಳಿದ್ದಾರೆ.