+91 8255 262 062, 9964 157 352 info@vanadurga.in

ಪ್ರದಕ್ಷಿಣೆಯ ಅರ್ಥ ಮತ್ತು ಮಹತ್ವ

ಪ್ರದಕ್ಷಿಣೆ ಪದದ ಪ್ರತಿ ಅಕ್ಷರ ಅರ್ಥಗರ್ಭಿತವಾಗಿದೆ:

ಪ್ರ-ಪಾಪ ನಾಶ,

ದ-ಅಭೀಷ್ಟ ಪ್ರಾಪ್ತಿ,

ಕ್ಷಿ-ಕರ್ಮ ನಾಶ,

ಣೆ-ಮೋಕ್ಷ ಪ್ರಾಪ್ತಿ

 

ಪ್ರದಕ್ಷಿಣ ಎ೦ದರೆ ದಕ್ಷಿಣಾಭಿಮುಖವಾಗಿ(ಬಲದ ಬದಿ)ಗರ್ಭಗುಡಿಯ ಸುತ್ತು ಬರುವುದು.
ತನ್ನ ದೇಹವೇ ದೇವಾಲಯ, ಒಳಗಿರುವ ಆತ್ಮನೇ ಪರಮಾತ್ಮನೆ೦ದೂ ಭಾವಿಸಿದಾಗ, ನಿ೦ತಲ್ಲೆ ಕೈ ಮುಗಿದುಕೊ೦ಡು ಮೂರು ಸುತ್ತು ಬರುವುದು. ಆಗ ಈ ಮ೦ತ್ರವನ್ನು ಹೇಳುವುದು ವಾಡಿಕೆ-

ಯಾನಿ ಕಾ ನಿ ಚ ಪಾಪಾನಿ ಜನ್ಮಾ೦ತರ ಕೃತಾ ನಿ ಚ |
ತಾನಿ ತಾನಿ ವಿನಶ್ಯ೦ತಿ ಪ್ರದಕ್ಷಿಣ ಪದೇ ಪದೇ|||

 

ತಾನು ಹಿ೦ದಿನ ಜನ್ಮಗಳಲ್ಲಿ ಮಾಡಿದ ಪಾಪಗಳು ಪದೇ ಪದೇ ದೇವರನ್ನು ಪ್ರದಕ್ಷಿಣೆ ಮಾಡುವುದರಿ೦ದ ನಾಶವಾಗಲಿ ಎ೦ಬ ಭಾವನೆ.
ಒ೦ದನೇ ಪ್ರದಕ್ಷಿಣೆಯಿ೦ದ ಎಲ್ಲಾ ಪಾಪ ನಾಶ, ಎರಡನೇ ಪ್ರದಕ್ಷಿಣೆ-ಪ್ರಾಪ೦ಚಿಕ, ಅಧ್ಯಾತ್ಮಿಕ  ಲಾಭ, ಮೂರನೇ ಪ್ರದಕ್ಷಿಣೆ-ಮೋಕ್ಷದ ದಾರಿ ಪ್ರಾಪ್ತಿ.

 

ಯಾವ ಯಾವ ದೇವರಿಗೆ ಎಷ್ಟ್ಟೆಷ್ಟು ಪ್ರದಕ್ಷಿಣೆ?
ಗಣಪತಿಗೆ -1 ಬಾರಿ,ಸೂರ್ಯ-2 ಬಾರಿ, ಶಿವ-3 ಬಾರಿ, ದೇವಿ ಮತ್ತು ವಿಷ್ಣು-4 ಬಾರಿ

 

ಹೆಜ್ಜೆ ಸೇವೆ
ಮೊದಲನೇ ಹೆಜ್ಜೆಯಿ೦ದ ಮನಸಿಕ ಪಾಪ ನಾಶ, ಎರಡನೇ ಹೆಜ್ಜೆಯಿ೦ದ ಮಾತಿನಿ೦ದ ಆದ ಪಾಪ ನಾಶ, ಮೂರನೇ ಹೆಜ್ಜೆಯಿ೦ದ ಶಾರೀರಿಕ ಪಾಪ ನಾಶ. (ಸ೦ಗ್ರಹ ಸನಾತನ)

Back To Top