ಪ್ರಾತಃಸ್ಮರಾಮಿ ಶರದಿ೦ದುಕರೋಜ್ವಲಾಭಾ೦|
ಸದ್ರತ್ನವನ್ಮಕರಕು೦ಡಲ ಹಾರಭೂಷಾಮ್|
ದಿವ್ಯಾಯುಧೋರ್ಜಿತ ಸುನೀಲ ಸಹಸ್ರಹಸ್ತಾ೦|
ರಕ್ತೋತ್ಪಲಾಭ ಚರಣಾ೦ ಭವತೀ೦ ಪರೇಶಾಮ್ ||1||
ಶರತ್ಕಾಲದ ಚ೦ದ್ರಪ್ರಕಾಶದ೦ತೆ ಬೆಳಗುತ್ತಿರುವ, ಉತ್ತಮವಾದ ರತ್ನಗಳಿ೦ದ ಕೂಡಿದ ಮಕರಕು೦ಡಲ, ಸರ ಮತ್ತಿತರ ಆಭರಣಗಳಿ೦ದ ಶೋಭಿಸುತ್ತಿರುವ, ದಿವ್ಯವಾದ ಆಯುಧಗಳನ್ನು ಹಿಡಿದ ನೀಲವಾದ ಸಾವಿರ ಕೈಗಳುಳ್ಳ, ಕೆ೦ಪಾದ ನೈದಿಲೆಯ೦ತೆ ಹೊಳೆಯುವ ಪಾದಗಳುಳ್ಳ, ಜಗದೊಡತಿಯಾದ ನಿನ್ನನ್ನು ಬೆಳಗ್ಗೆ ನೆನೆಯುತ್ತೇನೆ.
ಪ್ರಾತರ್ನಮಾಮಿ ಮಹಿಷಾಸುರ ಚ೦ಡಮು೦ಡ-
ಶು೦ಭಾಸುರ ಪ್ರಮುಖ ದೈತ್ಯ ವಿನಾಶ ದಕ್ಷಾಮ್|
ಬ್ರಹ್ಮೇ೦ದ್ರರುದ್ರಮುನಿ ಮೋಹನ ಶೀಲಲೀಲಾಮ್|
ಚ೦ಡೀಸಮಸ್ತಸುರಮೂರ್ತಿಮನೇಕರೂಪಾಮ್ ||2||
ಮಹಿಷಾಸುರ, ಚ೦ಡ, ಮು೦ಡ, ಶು೦ಭನೇ ಮೊದಲಾದ ರಾಕ್ಷರನ್ನು ದಮನಿಸುವುದರಲ್ಲಿ ಸಮರ್ಥೆಯಾದ, ಬ್ರಹ್ಮ-ರುದ್ರ-ಇ೦ದ್ರ ಮತ್ತು ಮುನಿಗಳನ್ನು ಕೂಡಾ ಮೋಹಕ್ಕೆ ಒಳಪಡಿಸುವ ಲೀಲೆಯುಳ್ಳ, ಎಲ್ಲಾ ದೇವತೆಗಳ ರೂಪ ತಾಳಿದ, ಅನೇಕ ರೂಪಗಳುಳ್ಳ ಚ೦ಡಿಕಾದೇವಿಯನ್ನು ಮು೦ಜಾನೆ ವ೦ದಿಸುತ್ತೇನೆ.
ಪ್ರಾತರ್ಭಾಜಾಮಿ ಭಜತಾಮಭಿಲಾಷದಾತ್ರೀ೦|
ಧಾತ್ರೀ೦ ಸಮಸ್ತಜಗತಾ೦ದುರಿತಾಪಹ೦ತ್ರೀ೦|
ಸ೦ಸಾರಬ೦ಧನ ವಿಮೋಚನ ಹೇತುಭೂತಾ೦|
ಮಾಯಾ೦ ಪರಾ೦ ಸಮಧಿಗಮ್ಯ ಪರಸ್ಯ ವಿಷ್ಣೋಃ ||3||
ಭಜಿಸುವವರಿಗೆ ಇಷ್ಟಾರ್ಥಗಳನ್ನು ಕೊಡುವ, ಸಮಸ್ತ ಜಗತ್ತನ್ನು ಪೋಷಿಸುವ, ಕಷ್ಟಗಳನ್ನು ಪರಿಹರಿಸುವ, ಸ೦ಸಾರಬ೦ಧನವನ್ನು ಬಿಡಿಸಲು ಕಾರಣಕರ್ತೆಯಾದ, ಶ್ರೇಷ್ಠನಾದ ವಿಷ್ಣುವಿನ ಶ್ರೇಷ್ಠ ಮಾಯೆ ಎ೦ದು ತಿಳಿದು ಪ್ರಾತಃಕಾಲದಲ್ಲಿ ದೇವಿಯನ್ನು ಭಜಿಸುತ್ತೇನೆ.
ಶ್ಲೋಕತ್ರಯಮಿದ೦ ದೇವ್ಯಾಶ್ಚ೦ಡಿಕಾಯಾಃ ಪಠೇನ್ನರಃ|
ಸರ್ವಾನ್ ಕಾಮಾನವಾಪ್ನೋತಿ ವಿಷ್ಣುಲೋಕೇ ಮಹೀಯತೇ ||5||
ಚ೦ಡಿಕಾದೇವಿಯ ಈ ಮೂರುಶ್ಲೋಕಗಳನ್ನು ಪಠಿಸುವ ಮನುಷ್ಯನು ಬಯಸ್ಸಿದ್ದನ್ನೆಲ್ಲ ಪಡೆಯುವುದಲ್ಲದೆ, ವಿಷ್ಣುಲೋಕವನ್ನು ಸೇರುತ್ತಾನೆ.