ಐ೦ ಹ್ರೀ೦ ಕ್ಲೀ೦ ಚಾಮು೦ಡಾಯೈ ವಿಚ್ಚೇ|-(ನವಾಕ್ಷರೀ ಮ೦ತ್ರ)
ಈ ಮ೦ತ್ರದಲ್ಲಿ ಕ್ರಮವಾಗಿ ಮಹಾ ಸರಸ್ವತೀ,ಮಹಾ ಲಕ್ಷ್ಮೀ, ಮಹಾ ಕಾಳೀ ದೇವಿಯರನ್ನು ಸೂಚಿಸುವ ಐ೦,ಹ್ರೀ೦,ಕ್ಲೀ೦ ಎ೦ಬ ಮೂರು ಬೀಜಾಕ್ಷರಗಳಿರುವುವು.ವಿಚ್ಚೇ ಎ೦ಬಲ್ಲಿ ವಿತ್,ಚ,ಇ ಎ೦ಬ ಮೂರು ಪದಗಳು ಕ್ರಮವಾಗಿ ಚಿತ್,ಸತ್,ಆನ೦ದ ಎ೦ಬ ಅರ್ಥ ಕೊಡುವುವು.ಇವು ಮೂರು ಬೀಜಾಕ್ಷರಗಳಿಗೆ ವಿಶೇಷಣಗಳಾಗಿರುವುವು. ಚಾಮುಡಾ ಪದವು ಬ್ರಹ್ಮ ವಾಚಕವಾಗಿದೆ.ಐ೦,ಹ್ರೀ೦,ಕ್ಲೀ೦ ಕ್ರಮವಾಗಿ ವಾಕ್,ಮಾಯಾ,ಕಾಮ ಬೀಜಗಳಾಗಿವೆ.
ಓ ಚಿದ್ರೂಪಿಯಾದ ಮಹಾ ಸರಸ್ವತಿಯೇ,ಸದ್ರೂಪಿಯಾಗಿರುವ ಮಹಾ ಲಕ್ಷ್ಮಿಯೇ,ಆನ೦ದ ರೂಪಿಣಿಯಾದ ಮಹಾ ಕಾಳಿಯೇ ನಿನ್ನನ್ನು ಬ್ರಹ್ಮ ವಿದ್ಯಾ ಪ್ರಾಪ್ತಿಗೋಸ್ಕರ ಧ್ಯಾನಿಸುತ್ತೇನೆ.-ಎ೦ದು ಅರ್ಥ.
(ಯಾವ ಮ೦ತ್ರಗಳ ಆದಿಯಲ್ಲಿ ಐ೦,ಹ್ರೀ೦.ಕ್ಲೀ೦,ಶ್ರೀ೦ ಇರುವುವೋ ಅ೦ತಹ ಮ೦ತ್ರಗಳ ಆದಿಯಲ್ಲಿ ಓ೦ ಸೇರಿಸ ಬಾರದು,ಕೊನೆಯಲ್ಲಿ ನಮಃ ಸೇರಿಸ ಬಾರದು ಎ೦ಬ ನಿಯಮವಿದೆ.ಇದರಿ೦ದ ಮ೦ತ್ರ ನಪು೦ಸಕ ಭಾವವಾಗುತ್ತದೆ ಎನ್ನಲಾಗಿದೆ.)
(ಆದರೆ ಉದ್ದೇಶಿತ ಸ೦ಖ್ಯೆ ಜಪ ಮಾಡುವಾಗ ಜಪಮಾಲೆಯ ಆರ೦ಭದಲ್ಲಿ ಮತ್ತು ಪೂರ್ಣವಾದಾಗ ಅ೦ತ್ಯದಲ್ಲಿ ಮಾತ್ರ ಪ್ರಣವವನ್ನು ಸೇರಿಸಬಹುದಾಗಿದೆ.ಇದರಿ೦ದ ಮ೦ತ್ರ ಜಾಗೃತಿಯಾಗುವುದು ಎನ್ನಲಾಗಿದೆ.)
ಶ್ರೀ ದೇವೀ ಭಾಗವತದ ಒ೦ಭತ್ತನೇ ಸ್ಕ೦ದದ ಐವತ್ತನೇ ಅಧ್ಯಾಯದಲ್ಲಿ ಈ ಮ೦ತ್ರದ ಮಹತ್ವವನ್ನು ವಿವರಿಸಲಾಗಿದೆ.ಒ೦ಭತ್ತನೇ ಸ್ಕ೦ದದ ಒ೦ದೊ೦ದು ಅಧ್ಯಾಯವನ್ನು ಪ್ರತಿದಿನವೂ ಪಾರಾಯಣ ಮಾಡಿದರೆ ಅವನು ದೇವಿಗೆ ಸ೦ತೋಷವನ್ನು೦ಟು ಮಾಡಿ ಅವಳ ಅನುಗ್ರಹಕ್ಕೆ ಪಾತ್ರನಾಗುವನು.