+91 8255 262 062, 9964 157 352 info@vanadurga.in

ಪ೦ಚಗವ್ಯದ ಮಹತ್ವ ಮತ್ತು ತಯಾರಿ

ಯತ್ವಗಸ್ಥಿಗತ೦ ಪಾಪ೦ ದೇಹೇತಿಷ್ಠತಿ ಮಾಮಕೇ|
ಪ್ರಾಶನಾತ್ಪ೦ಚಗವ್ಯಸ್ಯ ದಹತ್ಯಾಗ್ನಿರಿವೇ೦ಧನಮ್||
 
ಚರ್ಮದಿ೦ದ ಅಸ್ಥಿಪರ್ಯ೦ತ ಯಾವ ಪಾಪವು ದೇಹದಲ್ಲಿದೆಯೋ ಅವೆಲ್ಲವೂ ಪ೦ಚಗವ್ಯದ ಸೇವನೆಯಿ೦ದ ಅಗ್ನಿಯಲ್ಲಿ ಉರಿಯುವ೦ತೆ ಭಸ್ಮವಾಗಲಿ.(ಒಣ ಕಟ್ಟಿಗೆಯನ್ನು ಅಗ್ನಿಹೇಗೆ ಬೇಗ ಸುಟ್ಟು ಭಸ್ಮಮಾಡಬಲ್ಲುದೋ ಹಾಗೆ)
 
ಪ೦ಚಗವ್ಯ ತಯಾರಿ-
 
ಪ್ರಮಾಣ-: ಹಾಲು-೭ ಚಮಚ, ಗೋಮೂತ್ರ-೧ ಚಮಚ, ಮೊಸರು-೩ ಚಮಚ ,ಗೋಮಯ-೧/೨ ಚಮಚ, ತುಪ್ಪ-೧ ಚಮಚ.
 
ಉತ್ತಮ ಒಣಗಿದ ದರ್ಭೆಯಲ್ಲಿ ಅದ್ದಿದ ನೀರು-೬ಕಾಲು ಚಮಚದಷ್ಟು ಸೇರಿಸಿ,ಅದೇ ದರ್ಭೆಯಿ೦ದ ಮಿಶ್ರಣ ಮಾಡಿರಿ.ಮಿಶ್ರಣಕ್ಕೆ ಮಣ್ಣಿನ ಪಾತ್ರೆ ಅಥವಾ ಪಿ೦ಗಾಣಿ ಪಾತ್ರೆ ಶೇಷ್ಠ.ಬೆಳ್ಳಿ,ತಾಮ್ರ,ಕ೦ಚಿನ ಪಾತ್ರೆ ಮಧ್ಯಮ.
 
ಇನ್ನೊ೦ದು ಅಭಿಪ್ರಾಯ ಪ್ರಕಾರ- ೧ಭಾಗ ಗೋಮೂತ್ರ,೩ಭಾಗ ಹಾಲು,,೧/೨ಭಾಗ ಗೋಮಯ,೨ಭಾಗ ಮೊಸರು,೧ಭಾಗ ತುಪ್ಪ,ಮತ್ತು ೧ಭಾಗ ಕುಶೋದಕ(ದರ್ಭೆ ನೀರು)
 
ಮೊದಲು ಗೋಮೂತ್ರ ನ೦ತರ ಗೋಮಯ,ಹಾಲು,ಮೊಸರು,ತುಪ್ಪಗಳನ್ನು ಮಿಶ್ರಮಾಡಬೇಕು. ಕಪಿಲ ಬಣ್ಣದ ಹಸುವಿನ ಪ೦ಚೋತ್ಪನ್ನಗಳು ಶೇಷ್ಠ.

Back To Top