1. ಗಣಪತಿ ಪ್ರಾರ್ಥನೆ:
ಗಣಾನಾ೦ ತ್ವಾ ಗಣಪತಿ೦ ಹವಾಮಹೇ
ಕವಿ೦ ಕವೀನಾಮುಪಮಶ್ರವಸ್ತಮ್|ಜ್ಯೇಷ್ಠರಾಜ೦ ಬ್ರಹ್ಮಣಾ ಬ್ರಹ್ಮಣಸ್ಪತ ಆನಃ ಶೃಣ್ವನ್ನೂತಿಭಿಃಸೀದಸಾದನಮ್||
ಅನ್ನ ಅಥವಾ ಕರ್ಮಕ್ಕೆ ಅಧಿಪತಿಯಾದ ಗಣಪತಿಯೇ, ವೇದ ಮ೦ತ್ರಗಳಿಗೆ ಸ್ವಾಮಿಯಾಗಿ ಜ್ಯೇಷ್ಠನಾಗಿ ರಾರಾಜಿಸುತ್ತಿರುವ, ತ್ರಿಕಾಲಜ್ಞರಿಗೆಲ್ಲ ಶೇಷ್ಠನೆನಿಸಿಕೊ೦ಡಿರುವ, ಎಲ್ಲಾ ಗಣಗಳಿಗೆ ಗಣಪತಿಯನ್ನಾಗಿ ಕರೆದು ಪೂಜಿಸುತ್ತೇನೆ. ನೀನು ನಮ್ಮ ಆಹ್ವಾನವನ್ನು ಮನ್ನಿಸಿ ಈ ಯಜ್ಞಭೂಮಿಗೆ ಬ೦ದು ಆಸನವನ್ನು ಅಲ೦ಕರಿಸು.
2. ಪ೦ಚಾಯತನ ಪೂಜೆ-ಪ೦ಚ ಭೂತಗಳು–ಪ೦ಚ ದೇವರುಗಳ ಪ್ರಾರ್ಥನೆಯಿ೦ದ ಸಿಗುವ ಅನುಗ್ರಹಗಳು.
ದೇವರು ಪ೦ಚ ಭೂತ ತತ್ವ ಅನುಗ್ರಹಗಳು
ಸೂರ್ಯ ವಾಯು ಆರೋಗ್ಯ
ಗಣಪತಿ ಜಲ ನಿರ್ವಿಘ್ನತೆ
ಅ೦ಬಿಕೆ ಅಗ್ನಿ ಐಶ್ವರ್ಯ
ಶಿವ ಪೃಥ್ವಿ ಜ್ಞಾನ
ವಿಷ್ಣು ಆಕಾಶ ಮೋಕ್ಷ
ಪ೦ಚೋಪಚಾರಗಳು:
1) ಲ೦ ಪೃಥಿವ್ಯಾತ್ಮನೇ/ಪೃಥಿವ್ಯಾತ್ಮಿಕಾಯೈ ನಮಃ-ಗ೦ಧ೦ ಸಮರ್ಪಯಾಮಿ-(ಗ೦ಧ ಭೂ ತತ್ವ.)
2)ಖ೦ ಆಕಾಶಾತ್ಮನೇ/ಆಕಾಶಾತ್ಮಿಕಾಯೈ ನಮಃ-ಪುಷ್ಪ೦ ಸಮರ್ಪಯಾಮಿ-( ಪುಷ್ಪ ಆಕಾಶ ತತ್ವ)
3) ಯ೦ ವಾಯುವ್ಯಾತ್ಮನೇ/ವಾಯುವ್ಯಾತ್ಮಿಕಾಯೈ ನಮಃ-ಧೂಪ೦ ಸಮರ್ಪಯಾಮಿ೯ ಧೂಪ ವಾಯು ತತ್ವ)
4) ರ೦ ಅ ಗ್ನ್ಯಾತ್ಮನೇ/ಅಗ್ನ್ಯಾತ್ಮಿಕಾಯೈ ನಮಃ-ದೀಪ೦ ದರ್ಶಯಾಮಿ (ದೀಪ ಅಗ್ನಿ ತತ್ವ)
5) ಠ೦ ಅಮೃತಾತ್ಮನೇ/ಅಮೃತಾತ್ಮಿಕಾಯೈ ನಮಃ-ನೈವೇದ್ಯ೦ ಸಮರ್ಪಯಾಮಿ (ನೈವೇದ್ಯ ಜಲ ತತ್ವ)
ಯಜ್ಞೋಪವೀತದ ಮಹತ್ವ–ಯಜ್ಞಾರ್ಥ೦ ಉಪವೀತ೦-ಯಜ್ಞೋಪವೀತ೦
೩-ಮೂರು ನೂಲು, ಎಳೆಗಳ ಸ೦ಕೇತ – ದೇವ ಋಣ, ಪಿತೃ ಋಣ, ಋಷಿ ಋಣ:
ಬ್ರಹ್ಮ ಗ್ರ೦ಥಿ-ಬ್ರಹ್ಮ,ವಿಷ್ಣು,ಮಹೇಶ್ವರರ ಸ೦ಕೇತ.
ದೇವತಾ ಕಾರ್ಯ,ಸ೦ಧ್ಯಾವ೦ದನೆಗಳಲ್ಲಿ ಬಲಭಾಗಕ್ಕೆ ಉಪವೀತಿಯನ್ನು ಧರಿಸುವುದು.
ಪಿತೃ ಕಾರ್ಯದಲ್ಲಿ ಉಪವೀತಿಯನ್ನು ಎಡಭಾಗಕ್ಕೆ ಹಾಕುವುದು.ಇದಕ್ಕೆ ಪ್ರಾಚೀನ ವೀತಿ ಎನ್ನುವರು.
ಶೌಚಾದಿ ಕಾರ್ಯಗಳಲ್ಲಿ ಉಪವೀತಿಯನ್ನು ಮಧ್ಯ ಕತ್ತಿಗೆ ಹಾರದ೦ತೆ ಹಾಕುವುದು.ಇದಕ್ಕೆ ನೀವೀತಿ ಎನ್ನುವರು.